ಬೆಂಗಳೂರು: ಫೋನ್ ಖರೀದಿ ಮಾಡುವಾಗ ಯೂಸರ್ ಮ್ಯಾನ್ಯುವಲ್ ನೀಡಿಲ್ಲವೆಂಬ ಕಾರಣಕ್ಕೆ ಗ್ರಾಹಕನೊಬ್ಬ ದೂರು ನೀಡಿದ್ದಕ್ಕೆ ಈಗ ಒನ್ ಪ್ಲಸ್ ಕಂಪನಿ ದಂಡ ತೆರುವ ಪರಿಸ್ಥಿತಿಯಾಗಿದೆ.
ಹೊಸ ಮೊಬೈಲ್ ಫೋನ್ ತೆಗೆಯುವಾಗ ಸಾಮಾನ್ಯವಾಗಿ ಬಳಕೆ ಹೇಗೆ ಎಂಬ ಬಗ್ಗೆ ವಿವರಣೆ ನೀಡುವ ಗೈಡ್ ಒಂದನ್ನು ನೀಡಲಾಗುತ್ತದೆ. ಆದರೆ ಬೆಂಗಳೂರಿನ ಸಂಜಯ ನಗರ ನಿವಾಸಿ ಎಸ್ಎಂ ರಮೇಶ್ ಎಂಬವರಿಗೆ ಮೊಬೈಲ್ ಜೊತೆಗೆ ಯೂಸರ್ ಮ್ಯಾನ್ಯುವಲ್ ಸಿಕ್ಕಿರಲಿಲ್ಲ.
ಜೂನ್ ನಲ್ಲಿ ಅವರು ಒನ್ ಪ್ಲಸ್ ನಾರ್ಡ್ ಸಿಇ 3 ಮಾಡೆಲ್ ನ ಫೋನ್ ಖರೀದಿಸಿದ್ದರು. ಈ ಫೋನ್ ಗೆ 24, 598 ರೂ. ಬಿಲ್ ಕೂಡಾ ನೀಡಿದ್ದರು. ಆದರೆ ಅವರಿಗೆ ಇದುವರೆಗೆ ಯೂಸರ್ ಮ್ಯಾನ್ಯುವಲ್ ಸಿಕ್ಕಿರಲಿಲ್ಲ. ಇದರಿಂದಾಗಿ ಫೋನ್ ವ್ಯಾರಂಟಿ, ಬಳಕೆ ಹೇಗೆ ಎನ್ನುವ ಕುರಿತು ಯಾವುದೇ ಮಾಹಿತಿ ಇರಲಿಲ್ಲ.
ಫೋನ್ ಖರೀದಿಸಿ ನಾಲ್ಕು ತಿಂಗಳಾದ ಬಳಿಕ ಅವರು ಈ ಬಗ್ಗೆ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಇದು ಗ್ರಾಹಕ ಸೇವೆಯ ನಿರ್ಲ್ಯಕ್ಷತನದ ಪರಮಾವಧಿ ಎಂದು ಗ್ರಾಹಕ ನ್ಯಾಯಾಲಯ ಒನ್ ಪ್ಲಸ್ ಕಂಪನಿಗೆ 5,000 ರೂ.ಗಳ ದಂಡವನ್ನು ಗ್ರಾಹಕನಿಗೆ ತೆರಬೇಕು ಎಂದು ತೀರ್ಪು ನೀಡಿದೆ.