ಬೆಂಗಳೂರು: 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಿಂದ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಲ್ಲಿಸಿರುವ ಮೇಲ್ಮನವಿ ಮೇಲಿನ ತೀರ್ಪನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ ಆಗಸ್ಟ್ 13ಕ್ಕೆ ಮುಂದೂಡಿದೆ. ಈವಿನೇಶ್ ಅವರನ್ನು ತಿಳಿಯಲು ಆಗಸ್ಟ್ 13 ರವರೆಗೆ ಕಾಯಬೇಕಾಗಿದೆ.
ನಿಗದಿಗಿಂತ ತೂಕಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಾರೆ ಎಂದು ಕೊನೆ ಕ್ಷಣದಲ್ಲಿ ವಿನೇಶ್ ಅವರನ್ನು ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು.
ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ (ಅಡ್–ಹಾಕ್), ತಮ್ಮ ವಿರುದ್ಧದ ಕ್ರಮ ಪ್ರಶಸ್ನಿ ವಿನೇಶ್ ಶುಕ್ರವಾರ ಮೇಲ್ಮನವಿ ಸಲ್ಲಿಸಿದ್ದರು.
"ಸಿಎಎಸ್‌ನ ತಾತ್ಕಾಲಿಕ ವಿಭಾಗವು ವಿನೇಶ್ ಫೋಗಾಟ್ ವರ್ಸಸ್ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಮತ್ತು ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ ವಿಷಯದಲ್ಲಿ ಏಕೈಕ ಮಧ್ಯಸ್ಥಗಾರ ಗೌರವಾನ್ವಿತ ಡಾ. ಅನ್ನಾಬೆಲ್ಲೆ ಬೆನೆಟ್‌ಗೆ ಆಗಸ್ಟ್ 13, 2024 ರಂದು ಸಂಜೆ 6-00 ಗಂಟೆಯವರೆಗೆ ನಿರ್ಧಾರವನ್ನು ನೀಡಲು ಸಮಯವನ್ನು ವಿಸ್ತರಿಸಿದೆ.
ಶನಿವಾರ ಮಧ್ಯಾಹ್ನ, ಆಗಸ್ಟ್ 10 ರಂದು ರಾತ್ರಿ 9:30 IST ಕ್ಕೆ ತೀರ್ಪು ನೀಡಲಾಗುವುದು ಎಂದು CAS ಘೋಷಿಸಿತು. ಆದರೆ, ನಿರ್ಧಾರವನ್ನು ಮುಂದೂಡಲಾಯಿತು. ತೀರ್ಪನ್ನು ಆಗಸ್ಟ್ 13 ಕ್ಕೆ ಮುಂದೂಡಲಾಗಿದೆ ಎಂದು ನಂತರ ಬಹಿರಂಗಪಡಿಸಲಾಯಿತು, ಆದರೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ಸಿಎಎಸ್ ಹೆಚ್ಚುವರಿ ದಾಖಲೆಗಳನ್ನು ಕೋರಿದೆ ಎಂದು ಈಗ ಬಹಿರಂಗವಾಗಿದೆ.