ಜೊಮ್ಯಾಟೊಗೆ ಎದುರಾಗಿದೆ ಧರ್ಮ ಸಂಕಷ್ಟ

ಶುಕ್ರವಾರ, 2 ಆಗಸ್ಟ್ 2019 (08:59 IST)
ಬೆಂಗಳೂರು : ಗ್ರಾಹಕರ ಇಷ್ಟವಾದ ಆಹಾರವನ್ನು ಮನೆಗೆ ತಲುಪಿಸುವಂತಹ ಸೇವೆ ನೀಡುತ್ತಿರುವ ಜೊಮ್ಯಾಟೊಗೆ ಇದೀಗ ಧರ್ಮ ಸಂಕಷ್ಟ ಎದುರಾಗಿದೆ.




ಹೌದು. ಮಧ್ಯಪ್ರದೇಶದ ಜಬಲ್ ಪುರದಲ್ಲಿ ಗ್ರಾಹಕನೊಬ್ಬ ಹಿಂದೂ ಹುಡುಗನೇ ನನಗೆ ಆಹಾರವನ್ನು ಡೆಲಿವರಿ ಕೊಡಬೇಕು ಎಂದು ಆಗ್ರಹಿಸಿದ್ದಾನೆ. ಅಲ್ಲದೇ ಇದಕ್ಕೆ ಒಪ್ಪದ ಜೊಮಾಟೊ ಕಂಪೆನಿಯ ಆರ್ಡರ್ ನ್ನು ಕಾನ್ಸಲ್ ಮಾಡಿದ್ದಲ್ಲದೇ  ರೀಫಂಡ್ ನೀಡುವಂತೆ ಕೇಳಿದ್ದಾನೆ.


ಇದಕ್ಕೆ ಪ್ರತಿಕ್ರಿಯಿಸಿದ ಜೊಮಾಟೋ ಸಂಸ್ಥಾಪಕ ದೀಪೆಂದರ್ ಘೋಯಲ್, ಧಾರ್ಮಿಕ ತಾರತಮ್ಯಕ್ಕೆ ಜೊಮಾಟೋದಲ್ಲಿ ಅವಕಾಶವಿಲ್ಲ. ಧರ್ಮದ ಆಧಾರದಲ್ಲಿ ಯಾವುದೇ ಗ್ರಾಹಕ ಡೆಲಿವರಿಯಲ್ಲಿ ಬಯಸುವುದೇ ಆದಲ್ಲಿ ಅಂತವರಿಗೆ ಜೊಮಾಟೋ ಬಾಗಿಲು ಯಾವಾಗಲೂ ಮುಚ್ಚಿರುತ್ತದೆ ಎಂಬುದಾಗಿ ಹೇಳಿದ್ದಾರೆ.


ಕಳೆದ ಬಾರಿ ಇದೇ ತರಹದ ಘಟನೆ ಓಲಾದಲ್ಲಿ ನಡೆದಿತ್ತು. ಪ್ರಯಾಣಿಕನೊಬ್ಬ ಓಲಾದಲ್ಲಿ ಮುಸ್ಲೀಂ ಚಾಲಕನಾಗಿದ್ದಲ್ಲಿ ನಾನು ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯಾಗಿತ್ತು. ಜೊಮಾಟೋ ಹಾಗೆಯೇ  ಓಲಾ ಕೂಡ ಪ್ರಯಾಣಿಕನ ಮಾತನ್ನು ನಿರಾಕರಿಸಿ ಧರ್ಮದ ಆಧಾರದಲ್ಲಿ ಡ್ರೈವರ್ ನ್ನು ಆಯ್ಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ