ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡುವುದರೊಂದಿಗೆ ಅವರ ಹಣ ಸುರಕ್ಷಿತವಾಗಿರಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಖಾತೆಯಲ್ಲಿರುವ ಹಣದ ಬಗ್ಗೆ ಎಸ್‌ಎಂಎಸ್ ಸಂದೇಶ ನಿರಂತರವಾಗಿ ಕಳುಹಿಸುತ್ತಿದೆ. ರಿವಾರ್ಡ್ ಪಾಯಿಂಟ್ಸ್ ಹೆಸರಲ್ಲಿ ಗ್ರಾಹಕರ ಕ್ರೆಡಿಟ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ಲಕ್ಷಾಂತರ ರೂಪಾಯಿಗಳನ್ನು ವರ್ಗಾಯಿಸಿಕೊಂಡು ವಂಚನೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲಿದೆ ಬನ್ನಿ ನೋಡುವಾ....
ರಿವಾರ್ಡ್ ಪಾಯಿಂಟ್ಸ್ ಹೆಸರಲ್ಲಿ ಗಿಫ್ಟ್ ಓಚರ್ ನೀಡುವ ಆಮಿಷವೊಡ್ಡುವ ಬಗ್ಗೆ ಗ್ರಾಹಕರು ಎಚ್ಚರವಾಗಿರಬೇಕು ಎನ್ನುವ ಸಂದೇಶವನ್ನು ಬ್ಯಾಂಕ್ ಗ್ರಾಹಕರಿಗೆ ಈಗಾಗಲೇ ರವಾನಿಸಿದೆ.ಯಾವತ್ತೂ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಓಟಿಪಿ ಸಂಖ್ಯೆಯನ್ನು ಶೇರ್ ಮಾಡಬೇಡಿ. ಬ್ಯಾಂಕ್ ವಿಡಿಯೋ ಲಿಂಕ್ ಶೇರ್ ಮಾಡಿದ್ದು ಯಾವ ರೀತಿ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎನ್ನುವ ಬಗ್ಗೆ ಸಂಪೂರ್ಣ ವಿವರ ಲಭ್ಯವಿದೆ.
ನಿಮ್ಮನ್ನು ವಂಚಕರು ಈ ರೀತಿ ವಂಚಿಸುತ್ತಾರೆ ನೋಡಿ: ದೆಹಲಿಯ ಮಯೂರ್ ವಿಹಾರ್ ನಿವಾಸಿಯಾದ ಅಮಿತ್ ಚೌಹಾನ್ ಎನ್ನುವವರಿಗೆ ರಿವಾರ್ಡ್ ಪಾಯಿಂಟ್ಸ್ ಬಗ್ಗೆ ಎಸ್‌ಎಂಎಸ್ ಸಂದೇಶ ಬಂದಿತ್ತು. ಸಂದೇಶದಲ್ಲಿ ನಿಮ್ಮ ಇಮೇಲ್, ಡೆಬಿಟ್ ಕಾರ್ಡ್ ಸಂಖ್ಯೆ, ಡೆಬಿಟ್ ಕಾರ್ಡ್ ವಿವರಗಳನ್ನು ಕೇಳಲಾಗಿತ್ತು.
ವಂಚನೆಯಿಂದ ಪಾರಾಗುವುದು ಹೇಗೆ: ಬ್ಯಾಂಕ್ ಅಧಿಕಾರಿಗಳು ಯಾವತ್ತೂ ತಮ್ಮ ಗ್ರಾಹಕರಿಗೆ ಎಸ್‌ಎಂಎಸ್ ಸಂದೇಶ ರವಾನಿಸಿ ಬ್ಯಾಂಕ್ ಖಾತೆಯ ಬಗ್ಗೆ ಸಂಪೂರ್ಣ ವಿವರಗಳನ್ನು ಕೇಳುವುದಿಲ್ಲ. ಆದ್ದರಿಂದ, ಗ್ರಾಹಕರು ಇಂತಹ ವಂಚಕ ಎಸ್‌ಎಂಎಸ್‌ಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಹಣ ವಂಚನೆಯ ಬಗ್ಗೆ ಗ್ರಾಹಕರು ದೂರು ದಾಖಲಿಸುವುದು ಅಗತ್ಯ.