ಭಾರ್ತಿ ಏರ್ಟೆಲ್ ನ 599 ರೂ ರಿಚಾರ್ಜ್ ಮಾಡಿದವರಿಗೆ ಸಿಗಲಿದೆ ಬಂಪರ್ ಆಫರ್

ಬುಧವಾರ, 25 ಸೆಪ್ಟಂಬರ್ 2019 (08:56 IST)
ನವದೆಹಲಿ : ಬೇರೆ ಕಂಪೆನಿಗಳಿಗೆ ಟಕ್ಕರ್ ನೀಡಲು ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ 599 ರೂ.ವಿನ ಹೊಸ ಪ್ರಿಪೇಯ್ಡೆ​ ರಿಚಾರ್ಜ್​ ಪ್ಲಾನ್​ ಜೊತೆಗೆ 'ಭಾರ್ತಿ ಎಎಕ್ಸ್​ಎ ಲೈಫ್​ ಇನ್ಸೂರೆನ್ಸ್​' ನೀಡುತ್ತಿದೆ.
ಹೌದು. ಏರ್ಟೆಲ್ ನ 599 ರೂ. ನ ಪ್ಲಾನ್ ನಲ್ಲಿ ಪ್ರತಿದಿನ 2GB ಡೇಟಾವನ್ನು ನೀಡುತ್ತಿದೆ. ಜೊತೆಗೆ ಅನಿಯಮಿತ ಕರೆ ಹಾಗೂ ಪ್ರತಿ ದಿನ 100 SMS​ಗಳನ್ನು ಉಚಿತವಾಗಿ ನೀಡುತ್ತಿದೆ. ​ ಈ ಪ್ಲ್ಯಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಸದ್ಯಕ್ಕೆ ಈ ರೀಚಾರ್ಜ್​ ಪ್ಲಾನ್​ ತಮಿಳುನಾಡು, ಪಾಂಡಿಚೇರಿ ಪ್ರದೇಶಿಗರಿಗೆ ಮಾತ್ರ ಲಭ್ಯವಿದೆ. ಸ್ವಲ್ಪ ದಿನಗಳ ಬಳಿಕ ಭಾರತದ ಇತರ ರಾಜ್ಯಗಳಿಗೂ ಸಿಗುವುದಾಗಿ ಸಂಸ್ಥೆ ತಿಳಿಸಿದೆ.


ಅಷ್ಟೇ ಅಲ್ಲದೇ ಈ ಹೊಸ ಪ್ರಿಪೇಯ್ಡೆ​ ರಿಚಾರ್ಜ್​ ಪ್ಲಾನ್​ ಜೊತೆಗೆ ಗ್ರಾಹಕರಿಗೆ ವಿಶೇಷ ಆಫರ್ 4 ಲಕ್ಷ ರೂ.ವಿನ 'ಭಾರ್ತಿ ಎಎಕ್ಸ್​ಎ ಲೈಫ್​ ಇನ್ಸೂರೆನ್ಸ್​' ನೀಡುತ್ತಿದೆ. 18 ರಿಂದ 54 ವರ್ಷ ವಯೋಮಿತಿಯಿರುವ ಗ್ರಾಹಕರಿಗೆ ಈ ಪ್ರಯೋಜನೆ ಸಿಗಲಿದೆ. ಇದಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆ ಅಗತ್ಯವಿಲ್ಲ ಎಂದು ಕಂಪೆನಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ