2-3 ದಿನ ನೀರಿನಲ್ಲಿದ್ದರೂ ಹಾಳಾಗದೆ ಕಾರ್ಯನಿರ್ವಹಿಸುತ್ತಿದೆಯಂತೆ ಈ ಫೋನ್

ಶುಕ್ರವಾರ, 16 ಆಗಸ್ಟ್ 2019 (10:09 IST)
ಇಂಗ್ಲೆಂಡ್ : ಸಾಮಾನ್ಯವಾಗಿ ಫೋನ್ ಗಳು ನೀರಿಗೆ ಬಿದ್ದ ತಕ್ಷಣ ಅವು ತಮ್ಮ ಕಾರ್ಯವನ್ನು ನಿಲ್ಲಿಸಿಬಿಡುತ್ತವೆ. ಆದರೆ ಈ ಫೋನ್  ಸರೋವರಕ್ಕೆ ಬಿದ್ದು 3 ದಿನಗಳಾದರೂ ಕೂಡ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆಯಂತೆ.
ಹೌದು. ಸ್ಪ್ರಿಂಗ್ ಲೇಕ್‌ ವಾಟರ್ ಸ್ಪೋರ್ಟ್ಸ್‌ನ ಸಿಬ್ಬಂದಿಯೋರ್ವರು ಕರ್ತವ್ಯದಲ್ಲಿದ್ದ ವೇಳೆ ಅವರ ಆ್ಯಪಲ್ ಐಫೋನ್ ಎಕ್ಸ್ ನೀರಿಗೆ ಬಿದ್ದಿದೆಯಂತೆ. ಅದು ಹಾಳಾಗಿರುತ್ತದೆ ಎಂದು ತಿಳಿದಿದ್ದರೂ ಅದನ್ನು  ಮೇಲೆತ್ತಲು ಅವರು ಮುಳುಗುತಜ್ಞರಿಗೆ  ಹುಡುಕಲು  ಹೇಳಿದ್ದಾರೆ.


ಮುಳುಗುತಜ್ಞರಿಗೆ 2 ದಿನ ಹುಡುಕಿದರೂ ಸಿಗದ ಫೋನ್ 3ನೇ ದಿನ ಪತ್ತೆಯಾಯಿತು. ಆದರೆ ಆಶ್ವರ್ಯವೆನೆಂದರೆ ಅವರು ಐಫೋನ್  ನನ್ನು ಪರಿಶೀಲಿಸಿದಾಗ  ಅದು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಇದರಿಂದ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ