ವಿವೋದಿಂದ ವೈ55ಎಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ

ಬುಧವಾರ, 5 ಅಕ್ಟೋಬರ್ 2016 (20:17 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ವಿವೋ 4ಜಿ ವಿಓಎಲ್‌ಟಿಇ ವೈಶಿಷ್ಟ್ಯದ ವೈ55ಎಲ್ ಪೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಆವೃತ್ತಿಯ ಪೋನ್‌ಗಳು 11,980 ರೂಪಾಯಿಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
ಪ್ರಸಕ್ತ ಸಾಲಿನ ಜನವರಿ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ ವೈ51ಎಲ್ ಸ್ಮಾರ್ಟ್‌ಪೋನ್‌ಗಳನ್ನೇ ಅಪ್‌ಡೇಟ್ ಮಾಡಿ ವೈ55ಎಲ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. 
 
ಈ ಹೊಸ ಆವೃತ್ತಿಯ ಪೋನ್‌ಗಳು ಸ್ಪಿಟ್ ಸ್ಕ್ರೀನ್ ವೈಶಿಷ್ಟ್ಯದ ಜೊತೆಗೆ ಮಲ್ಟಿಟಾಸ್ಕಿಂಗ್, ಐ ಪ್ರೋಟೆಕ್ಷನ್ ವಿಶೇಷತೆಯನ್ನು ಒಳಗೊಂಡಿದ್ದು, ಈ ಪೋನ್‌ಗಳ ದೇಶದ್ಯಾಂತ ಗೋಲ್ಡ್ ಹಾಗೂ ಸ್ಪೇಸ್ ಗ್ರೇ ಬಣ್ಣದಲ್ಲಿ ಲಭ್ಯವಾಗಲಿವೆ. 
 
ವೈ55ಎಲ್ ವೈಶಿಷ್ಟ್ದ ಸ್ಮಾರ್ಟ್‌ಪೋನ್‌ಗಳು ಫನ್‌ಟಚ್ ಓಎಸ್ ಆಧಾರಿತ ಆಂಡ್ರಾಯ್ಡ್ 6.0 ಮಾರ್ಷ್ಮ್ಯಾಲೋ ವೈಶಿಷ್ಟ್ಯ ಹೊಂದಿದ್ದು, 720x1280 ಪಿಕ್ಸೆಲ್ಸ್ ಹೊಂದಿರುವ 5.2 ಇಂಚ್ ಎಚ್‌‌ಡಿ ಡಿಸ್‌ಪ್ಲೇ ಹೊಂದಿದೆ. ಈ ಪೋನ್‌ಗಳು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430 ಆಕ್ಟಾ ಕೋರ್ ಪ್ರೊಸೆಸರ್ ಜೊತೆಗೆ 2 ಜಿಬಿ ರ್ಯಾಮ್ ಒಳಗೊಂಡಿದೆ.
 
ಈ ಹೊಸ ವೈಶಿಷ್ಟ್ಯದ ಪೋನ್‌ಗಳು ಸೆನ್ಸಾರ್ ಜೊತೆಗೆ 8 ಮೆಗಾ ಪಿಕ್ಸಿಲ್ಸ್ ರಿಯರ್ ಕ್ಯಾಮೆರಾ ಹಾಗೂ 5 ಮೆಗಾ ಪಿಕ್ಸೆಲ್ಸ್ ಫ್ರಂಟ್ ಕ್ಯಾಮೆರಾ ಹೊಂದಿದ್ದು, 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹಾಗೂ 128 ಜೆಬಿ ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 4ಜಿ, ವಿಓಎಲ್‌ಟಿಇ, ವೈ-ಫೈ, ಬ್ಲೂಟೂತ್, 3.5 ಎಂಎಂ ಆಡಿಯೋ ಜಾಕ್ ಮತ್ತು ಮೈಕ್ರೋ ಯುಎಸ್‌ಬಿ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.
 
ವೈ55ಎಲ್ ವೈಶಿಷ್ಟ್ದ ಸ್ಮಾರ್ಟ್‌ಪೋನ್‌ಗಳು 2650 ಎಂಎಚ್‌ಝಡ್ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 147.9x72.9x7.5 ಎಂಎಂ ಸುತ್ತಳತೆ, 142 ಗ್ರಾಂ ತೂಕ ಹೊಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ