ಪೇಟಿಎಂಗೆ ಆರ್.ಬಿ.ಐ ನೀಡಿದ ಸೂಚನೆ ಏನು ಗೊತ್ತಾ?

ಗುರುವಾರ, 2 ಆಗಸ್ಟ್ 2018 (11:47 IST)
ಬೆಂಗಳೂರು : ಪೇಟಿಎಂಗೆ ನೂತನ ಬಳಕೆದಾರರನ್ನು ಸೇರಿಸಿಕೊಳ್ಳುವ ಕಾರ್ಯವನ್ನು ಈ ಕೂಡಲೇ ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಪೇಟಿಎಂ ಆಡಳಿತ ಮಂಡಳಿಗೆ ಸೂಚನೆ ನೀಡಿದೆ.


ಕಾರಣ ನೂತನ ಗ್ರಾಹಕರನ್ನು ಸೇರಿಸಿಕೊಳ್ಳುವ ವೇಳೆ ಪೇಟಿಎಂ ತನ್ನ ನಿಷ್ಠೆಯನ್ನು ಪ್ರದರ್ಶಿಸಿಲ್ಲ. ಕೆವೈಸಿ ನಂಬರ್ ನಲ್ಲೂ ಹಲವು ಬಾರಿ ಪೇಟಿಎಂ ಪ್ರತಿ ಮೂರರಿಂದ ನಾಲ್ಕು ವ್ಯಕ್ತಿಗಳಲ್ಲಿ ನಿಯಮ ಉಲ್ಲಂಘನೆ ಮಾಡ್ತಿದೆ ಅಂತ ಆರ್.ಬಿ.ಐ. ತಿಳಿಸಿದೆ.


ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೇಟಿಎಂ ಆಡಳಿತ ಮಂಡಳಿ, ಸದ್ಯ ಪೇಟಿಎಂ ತನ್ನ ಖಾತೆಗಳಲ್ಲಿ ಬದಲಾವಣೆ ತರೋದಕ್ಕೆ ಹೊರಟಿದೆ. ಖಾತೆ ತೆರೆಯುವ ಪ್ರಕ್ರಿಯೆ ಮತ್ತು ಈಗಾಗ್ಲೇ ಇರುವ ಖಾತೆಗಳ ನಿರ್ವಹಣೆ ಬಗ್ಗೆ ಮತ್ತಷ್ಟು ಸುಧಾರಣಾ ಕ್ರಮಗಳನ್ನ ಕೈಗೊಳ್ಳುವ ಪ್ರಕ್ರಿಯೆ ನಡೆಸುತ್ತಿದೆ’ ಎಂದು ಹೇಳಿದೆ. ಸದ್ಯಕ್ಕೆ ಕರೆಂಟ್ ಅಕೌಂಟ್ಗಳಿಗೆ ಗ್ರಾಹಕರನ್ನು ಸೇರಿಸಿಕೊಳ್ಳುವ ಕಾರ್ಯವನ್ನು ನಿಲ್ಲಿಸಲಾಗಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ