ಜೊಮಾಟೊ ಜತೆ ಉಬರ್ ಈಟ್ಸ್ ಒಂದಾಗಲಿದೆಯಾ…?

ಮಂಗಳವಾರ, 17 ಡಿಸೆಂಬರ್ 2019 (13:25 IST)
ನವದೆಹಲಿ: ಉಬರ್ ಈಟ್ಸ್ ಇಂಡಿಯಾ ಅನ್ನು ಪ್ರತಿಸ್ಪರ್ಧಿ ಜೊಮಾಟೊ ಗೆ ಮಾರಾಟವಾಗಲಿದೆಯಂತೆ. ಜೊಮಾಟೊ ಮತ್ತು ಸ್ವಿಗ್ಗಿ ಜತೆ ಪ್ರತಿಸ್ಪರ್ಧೆ ನೀಡಲು ಉಬರ್ ಈಟ್ಸ್ ಗೆ ಸಾಧ್ಯವಾಗದೇ ಜೊಮಾಟೊ ಜತೆ ಒಂದಾಗಲು ಹೊರಟಿದೆ.



ಜೊಮಾಟೊ 1.5 ಲಕ್ಷ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಂದ ಪ್ರತಿದಿನ 13 ಲಕ್ಷ ಆರ್ಡರ್ ಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಸ್ವಿಗ್ಗಿಯನ್ನು ಹಿಂದಿಕ್ಕಲು ಜೊಮಾಟೊಗೆ ಸಾಧ್ಯವಾಗಿಲ್ಲ. 2017ರಲ್ಲಿ ಉಬರ್ ಈಟ್ಸ್ ಇಂಡಿಯಾ ಶುರುವಾದರೂ ಜೊಮೊಟೊ ಹಾಗೂ ಸ್ವಿಗ್ಗಿ ಜತೆಗೆ ಉಬರ್ ಗೆ ಸ್ಪರ್ಧೆ ನೀಡಲು ಆಗಲಿಲ್ಲ. ಹಾಗಾಗಿ ಜೊಮೊಟೊ ಗೆ ಮಾರಾಟ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.


ಜೊಮಾಟೊ ಜತೆ ಉಬರ್ ವಿಲೀನವಾದರೆ ಸ್ವಿಗ್ಗಿಯನ್ನು ಹಿಂದಕ್ಕಿ ಅತಿ ದೊಡ್ಡ ಆನ್ ಲೈನ್ ಫುಡ್ ಡೆಲಿವರಿ ಸಂಸ್ಥೆ ಎಂದೆನಿಸಿಕೊಳ್ಳಲಿದೆ. ಆದರೆ ಈ ಒಪ್ಪಂದ ಇನ್ನೂ ಅಂತಿಮವಾಗಿಲ್ಲ.  ಈ ವರ್ಷದ ಅಂತ್ಯಕ್ಕೆ ಈ ಮಾತುಕತೆ ಅಂತಿಮ ಹಂತಕ್ಕೆ ಬರುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ