ಸ್ವಿಗ್ಗಿ ಸಂಸ್ಥೆಯಿಂದ ಸ್ವಿಗ್ಗಿ ಗೋ ಎಂಬ ಹೊಸ ಸೇವೆ ಆರಂಭ

ಗುರುವಾರ, 5 ಸೆಪ್ಟಂಬರ್ 2019 (09:30 IST)
ಬೆಂಗಳೂರು  : ನಗರದಲ್ಲಿರುವ ಪ್ರತಿಯೊಬ್ಬ  ಗ್ರಾಹಕನಿಗೂ ಡೆಲಿವರಿಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಸ್ವಿಗ್ಗಿ ಸಂಸ್ಥೆ ಇದೀಗ ಸ್ವಿಗ್ಗಿ ಗೋ ಎಂಬ ಹೊಸ ಸೇವೆಯನ್ನು ಆರಂಭಿಸಿದೆ.
ಸ್ವಿಗ್ಗಿ ಗೋ ಸೇವೆಯನ್ನು ಲಾಂಡ್ರಿಯನ್ನು ಒಯ್ಯಲು, ರವಾನಿಸಲು, ಮರೆತುಹೋಗಿರುವ ಕೀಲಿಕೈಗಳನ್ನು ಸೂಕ್ತ ಮಾಲೀಕನಿಗೆ ತಲುಪಿಸಲು, ಮನೆಯಿಂದ ಕಚೇರಿಗೆ ಊಟದ ಡಬ್ಬಿಯನ್ನು ತೆಗೆದುಕೊಂಡು ಹೋಗಲು ಅಥವಾ ಕ್ಲೈಂಟ್‍ಗಳಿಗೆ ಕಡತಗಳು ಅಥವಾ ಪಾರ್ಸೆಲ್‍ ಗಳನ್ನು ತಲುಪಿಸಲು ಹೀಗೆ ಹಲವು  ಉದ್ದೇಶಗಳಿಗಾಗಿ ಇದನ್ನ ಬಳಸಬಹುದಾಗಿದೆ.


ಬೆಂಗಳೂರಿನಾದ್ಯಂತ ಈ ಸೇವೆ ಆರಂಭವಾಗಿದ್ದು ಸ್ವಿಗ್ಗಿ ಸ್ಟೋರ್‌ ಗಳಂತೆಯೇ ಸ್ವಿಗ್ಗಿ ಗೋ ಎನ್ನುವುದು ಕೂಡ ಸ್ವಿಗ್ಗಿ ಅಪ್ಲಿಕೇಷನ್‍ನ ಭಾಗವೇ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ