ಕೊಳಕಾದ, ಬರೆದಿರುವ ನೋಟು ನಿಮ್ಮ ಬಳಿ ಇದ್ದರೆ ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ

ಸೋಮವಾರ, 5 ನವೆಂಬರ್ 2018 (12:44 IST)
ನವದೆಹಲಿ : ಇನ್ನುಮುಂದೆ ನಿಮ್ಮ ಬಳಿ ಇರುವ ನೋಟಿನಲ್ಲಿ ಏನೇನೋ ಬರೆದಿದ್ದರೆ ಅಥವಾ ಗಲಿಜಾಗಿದ್ದರೆ ಅದಕ್ಕಾಗಿ ಈ ನೋಟು ಕೆಲಸಕ್ಕೆ ಬಾರದು ಎಂದು ತಲೆ ಮೇಲೆ ಕೈ ಹೊತ್ತು ಚಿಂತಿಸುವ ಅವಶ್ಯಕತೆ ಇಲ್ಲ.


ಯಾಕೆಂದರೆ ಕೊಳಕಾದ ಹಾಗೂ ಬರೆದ ನೋಟುಗಳನ್ನು ನಿಷ್ಪ್ರಯೋಜಕ ನೋಟುಗಳೆಂದು ಪರಿಗಣಿಸಬಾರದು ಎಂದು ರಿಸರ್ವ್ ಬ್ಯಾಂಕ್, ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಿದೆ. ಆದಕಾರಣ ಈ ನೋಟುಗಳನ್ನು ಯಾವುದೇ ಬ್ಯಾಂಕ್ ನಿರಾಕರಿಸುವಂತಿಲ್ಲ. ಹಾಗೂ ಎಲ್ಲ ಬ್ಯಾಂಕ್ ಗಳು ಗಲಿಜಾದ ಹಾಗೂ ಬರೆದ ನೋಟುಗಳನ್ನು ಗ್ರಾಹಕರಿಂದ ಪಡೆಯಬೇಕೆಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.


ಈ ಹಿಂದೆ 500 ಹಾಗೂ 2 ಸಾವಿರ ಮುಖ ಬೆಲೆಯ ನೋಟುಗಳು ಗಲಿಜಾಗಿದ್ದರೆ ಅಥವಾ ಅದರ ಮೇಲೆ ಬರೆದಿದ್ದರೆ ಬ್ಯಾಂಕ್ ಗಳು ಆ ನೋಟುಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿರುವ  ಹಿನ್ನಲೆಯಲ್ಲಿ ರಿಸರ್ವ್ ಬ್ಯಾಂಕ್ ಈ ಆದೇಶ ಹೊರಡಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ