ನಟ ಸಲ್ಮಾನ್ ಖಾನ್ ಹತ್ಯೆಗಾಗಿಯೇ ಗುಂಡಿನ ದಾಳಿ: ಮುಂಬೈ ಪೊಲೀಸರು
ಆರೋಪಿಗಳನ್ನು ಸೋಮವಾರ ರಾತ್ರಿ ಗುಜರಾತ್‌ನ ಕಚ್ ಜಿಲ್ಲೆಯ ಮಾತಾ ನೊ ಮಧ್ ಗ್ರಾಮದ ದೇವಸ್ಥಾನದ ಆವರಣದಲ್ಲಿ ಬಂಧಿಸಲಾಗಿದೆ.
ಪೊಲೀಸರ ಪ್ರಕಾರ ಆರೋಪಿ ಗುಪ್ತಾ ಸ್ಕೂಟರ್ ಓಡಿಸುತ್ತಿದ್ದು, ಪಾಲ್ ಎಂಬಾತ ಸಲ್ಮಾನ್ ಮನೆ ಮೇಲೆ ಗುಂಡು ಹಾರಿಸಿದ್ದಾನೆ.
ಮಂಗಳವಾರ ಇಬ್ಬರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಘಟನೆ ಹಿಂದಿರುವ ಮಾಸ್ಟರ್ ಮೈಂಡ್ ಯಾರೆಂದು ಪತ್ತೆ ಹಚ್ಚು ನಿಟ್ಟಿನಲ್ಲಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದರು. ಇನ್ನೂ ಸಲ್ಮಾನ್ ಖಾನ್ ಕೊಲ್ಲುವ ಉದ್ದೇಶದಿಂದ ಈ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.