ಅಭಿಷೇಕ್, ಅವಿವಾ ಅದ್ಧೂರಿ ಆರತಕ್ಷತೆ: ಸಿಎಂ ಸಿದ್ದು, ನಟ ಚಿರಂಜೀವಿ ಭಾಗಿ

ಬುಧವಾರ, 7 ಜೂನ್ 2023 (20:37 IST)
Photo Courtesy: Instagram
ಬೆಂಗಳೂರು: ಅಭಿಷೇಕ್ ಅಂಬರೀಶ್-ಅವಿವಾ ಜೋಡಿಯ  ವಿವಾಹ ಆರತಕ್ಷತೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.

ಅದ್ಭುತ ದೀಪಾಲಂಕಾರದಿಂದ ನಿರ್ಮಿತವಾದ ಮಂಟಪದಲ್ಲಿ ಅಭಿ-ಅವಿವಾ ಜೋಡಿ ಕಂಗೊಳಿಸುತ್ತಿದ್ದಾರೆ. ಇನ್ನು, ವಿವಾಹ ಆರತಕ್ಷತೆಗೆ ಗಣ್ಯರ ಜೊತೆಗೆ ಅಭಿಮಾನಿಗಳಿಗೂ ಆಹ್ವಾನ ನೀಡಲಾಗಿದೆ. ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳೂ ಆಗಮಿಸಿ ಶುಭ ಹಾರೈಸುತ್ತಿದ್ದಾರೆ.

ಇನ್ನು, ಇಂದು ರಾಜಕೀಯ ಗಣ್ಯರ ದಂಡೇ ಹರಿದುಬರುತ್ತಿದೆ. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಚಿವ ಜಮೀರ್ ಅಹಮ್ಮದ್ ಮೊದಲಾದವರು ಆಗಮಿಸಿ ನವ ಜೋಡಿಗೆ ಹಾರೈಸಿದ್ದಾರೆ. ಇವರಲ್ಲದೆ ನಟಿ ಖುಷ್ಬೂ ಸುಂದರ್, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ. ಹರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಪುತ್ರ ಮನೋರಂಜನ್, ಶತ್ರುಘ್ನ ಸಿನ್ಹಾ, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ