ತಾಳಿ ಕಟ್ಟುವಾಗ ಪುರೋಹಿತರು ಕೇಳಿದ ಪ್ರಶ್ನೆಗೆ ನಟ ಧನಂಜಯ್‌ಗೆ ನಗುವೋ ನಗು
ತಾಳಿ ಕಟ್ಟುವ ವೇಳೆ ಧನಂಜಯ್ ಅವರನ್ನು ಪುರೋಹಿತರು ಮೂರು ಗಂಟು ಹಾಕಿದ್ದೀಯಲ್ಲ ಎಂದು ಕೇಳುತ್ತಾರೆ. ಅದಕ್ಕೆ ಧನಂಜಯ್ ಹುಂ ಹಾಕಿದ್ದೀನಿ ಎಂದು ನಗುತ್ತಲೇ ಉತ್ತರಿಸುತ್ತಾರೆ.
ಭಾನುವಾರ ಬೆಳಗ್ಗೆಯಿಂದಲೇ ಧಾರಾ ಮುಹೂರ್ತದ ದಿನದ ಶಾಸ್ತ್ರಗಳು ನಡೆಯಿತು. ಮೊದಲು ಮಂಟಪಕ್ಕೆ ದೇವತಾ ಪ್ರವೇಶ ನಂತರ ನವ ಪ್ರಧಾನ ಕಳಸ ಪೂಜೆ, ಕನ್ಯಾದಾನ, ಸಂಬಂಧ ಮಾಲೆ ಅರ್ಪಣೆ ಶಾಸ್ತ್ರ ನೆರವೇರಿದೆ.