ಅಮೆಜಾನ್ ನಲ್ಲಿ ಈ ಪುಸ್ತಕವನ್ನು ಖರೀದಿಸಲು ಲಿಂಕ್ ಹಂಚಿಕೊಂಡ ನಟ ಚಿರಂಜೀವಿ. ಆ ಪುಸ್ತಕ ಯಾವುದು ಗೊತ್ತಾ?

ಶನಿವಾರ, 2 ಜನವರಿ 2021 (07:38 IST)
ಹೈದರಾಬಾದ್ : ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರಿಗೆ ನೆರವಾದ ಬಾಲಿವುಡ್ ನಟ ಸೋನು ಸೂದ್ ಚಿತ್ರದ ಶೂಟಿಂಗ್ ನಡುವೆ ಸೇವಾ ಚಟುವಟಿಕೆಗಳ ಬಗ್ಗೆ ಪುಸ್ತಕ ಬರೆದಿದ್ದಾರೆ.

ಆಚಾರ್ಯ ಚಿತ್ರದಲ್ಲಿ ನಟಿಸುತ್ತಿರುವ ಸೋನು ಸೂದ್ ಅವರು ಚಿತ್ರದ ಸೂಟಿಂಗ್ ಸೆಟ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಈ ಪುಸ್ತಕವನ್ನು ನೀಡಿದ್ದಾರೆ.  ಇದನ್ನು ಸ್ವೀಕರಿಸಿದ ನಟ ಚಿರಂಜೀವಿ ಅವರು ನಟ ಸೋನು ಸೂದ್ ಅವರ ಕಾರ್ಯವನ್ನು ಹೊಗಳಿದ್ದಾರೆ ಮತ್ತು ಅಮೆಜಾನ್ ನಲ್ಲಿ ಈ ಪುಸ್ತಕವನ್ನು ಖರೀದಿಸಲು ಅಭಿಮಾನಿಗಳಲ್ಲಿ ಮನವಿ ಮಾಡಿ ಅದರ ಲಿಂಕ್ ನ್ನು ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ