ಮತ್ತೆ ಶುರುವಾಯ್ತು ರಜನೀಕಾಂತ್ ಅಳಿಯ ನಟ ಧನುಷ್ ಜನ್ಮ ವಿವಾದ

ಬುಧವಾರ, 25 ಅಕ್ಟೋಬರ್ 2017 (08:26 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಳಿಯ ನಟ ಧನುಷ್ ಜನ್ಮ ವೃತ್ತಾಂದ ಕುರಿತಾಗಿ ಮತ್ತೊಮ್ಮೆ ವಿವಾದವೇಳುವ ಲಕ್ಷಣ ತೋರುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧನುಷ್ ನ್ಯಾಯಾಲಯಕ್ಕೆ ಒದಗಿಸಿದ ದಾಖಲೆಗಳು ನಕಲಿ ಎಂದು ಹೇಳಲಾಗಿದೆ.

 
ಮಧುರೈ ಮೂಲದ ವೃದ್ಧ ದಂಪತಿ ಕದಿರೇಶನ್ ಮತ್ತು ಮೀನಾಕ್ಷಿ ಧನುಷ್ ತಮ್ಮ ಪುತ್ರ, ಸಿನಿಮಾ ಹುಚ್ಚಿನಿಂದ ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಓಡಿಹೋಗಿದ್ದ. ಈಗ ಆತನಿಂದ ತಮಗೆ ಜೀವನಾಂಶ ಕೊಡಿಸಬೇಕೆಂದು ನ್ಯಾಯಾಲಯದಲ್ಲಿ ದೂರು ನೀಡಿದ್ದರು.

ಆದರೆ ಇದನ್ನು ಅಲ್ಲಗಳೆಯುತ್ತಿರುವ ಧನುಷ್ ತಾನು ನಿರ್ದೇಶಕ ಕಸ್ತೂರಿ ರಾಜನ್ ಅವರ ಪುತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ನ್ಯಾಯಾಲಯಕ್ಕೆ ಒದಗಿಸಿದ್ದಾರೆ. ಆದರೆ ನ್ಯಾಯಾಲಯಕ್ಕೆ ಒದಗಿಸಿದ ಜನನ ನೋಂದಣಿ ದಾಖಲೆ ನಕಲಿ ಎಂದು ಕದಿರೇಶನ್ ದಂಪತಿ ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಮತ್ತೆ ಧನುಷ್ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ