ಅಭಿಮಾನಿಗಳಿಗೆ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಟಿಪ್ಸ್ ನೀಡಿದ ನಟಿ ಸಮಂತಾ
ಶನಿವಾರ, 15 ಆಗಸ್ಟ್ 2020 (08:59 IST)
ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಅಭಿಮಾನಿಗಳಿಗೆ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಟಿಪ್ಸ್ ನೀಡಿದ್ದಾರೆ.
ಆರೋಗ್ಯ ಉತ್ತಮವಾಗಿದ್ರೆ ನಾವು ಯಂಗ್ ಆಗಿ ಕಾಣಿಸುತ್ತೇವೆ, ಇಲ್ಲವಾದರೆ ಯೌವನ ಕ್ಷೀಣಿಸುತ್ತೆ ಎಂದು ನಟಿ ಸಮಂತಾ ತಿಳಿಸಿದ್ದಾರೆ. ಹಾಗೇ ತಾವು ಪ್ರತಿದಿನ ಹೇಗೆ ಆರೋಗ್ಯ ಕಾಪಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇವರು ಪ್ರತಿದಿನ ಯೋಗ, ಮೆಡಿಟೇಶನ್ ಮಾಡುತ್ತಾರಂತೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಾಜಾ ಹಣ್ಣುಗಳನ್ನು ಸೇವಿಸುತ್ತಾರಂತೆ. ಇದರಿಂದ ಹೆಚ್ಚೆಚ್ಚು ಹೆಲ್ದಿಯಾಗಿರ್ತಿವಿ ಎಂದು ಅವರು ಸಲಹೆ ನೀಡಿದ್ದಾರೆ.
ಹಾಗೇ ಬೆಳಿಗ್ಗೆ ಉಪಹಾರವಾಗಿ ಅವಕಾಡೋ, ಮೊಟ್ಟೆ ಮತ್ತು ಗೆಣಸು ಸೇವಿಸುತ್ತಾರಂತೆ, ಮಧ್ಯಾಹ್ನ ಮೀನು, ತರಕಾರಿ ಊಟ, ಜೊತೆಗೆ ಮಿಂಟ್, ತುಳಸಿ ಎಲೆಗಳು, ಎಳನೀರು ಸೇವಿಸುತ್ತಾರಂತೆ. ಇವರು ಬೇಕಾದ ತರಕಾರಿಗಳನ್ನು ಮನೆಯಲ್ಲಿಯೇ ಬೆಳೆಸುತ್ತಾರಂತೆ.