ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂಜಯ್ ದತ್ ಗೆ ನಟ ಚಿಜೀವಿ ಹೇಳಿದ್ದೇನು ಗೊತ್ತಾ?
ಟ್ವಿಟರ್ ನಲ್ಲಿ ಸಂಜಯ್ ದತ್ ಜೊತೆಗಿನ ಫೋಟೊವೊಂದನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ಚಿರಂಜೀವಿಯವರು, ಸಂಜಯ್ ದತ್ ಭಾಯ್, ನೀವು ಅನಾರೋಗ್ಯ ಪರಿಸ್ಥಿತಿಯಲ್ಲಿದ್ದೀರಿ ಎಂದು ತಿಳಿದು ಬಹಳ ನೋವಾಗಿದೆ. ಆದರೆ ನೀವೊಬ್ಬ ಹೋರಾಟಗಾರರಾಗಿದ್ದೀರಾ, ಬಹಳ ವರ್ಷಗಳಿಂದಲೂ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾ ಬಂದಿದ್ದೀರಿ. ಆದಕಾರಣ ನೀವು ಇದರಿಂದ ಬೇಗ ಹೊರಬರುತ್ತೀರಿ ಎಂಬ ನಂಬಿಕೆ ಇದೆ. ಆದಷ್ಟು ಬೇಗ ಗುಣಮುಖರಾಗಿ ಎಂದು ಪ್ರೀತಿಯಿಂದ ಹಾರೈಸಿದ್ದಾರೆ.