ನಟ ಸುಶಾಂತ್ ಸಿಂಗ್ ಜೊತೆ ಧಮ್ ಹೊಡೆತಿದ್ದೆ ಎಂದ ನಟಿ ಸಾರಾ ಅಲಿಖಾನ್

ಶನಿವಾರ, 26 ಸೆಪ್ಟಂಬರ್ 2020 (22:41 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರ ಮಾಜಿ ಗೆಳತಿ ಎನ್ನಲಾಗುತ್ತಿರುವ ನಟಿ ಸಾರಾ ಅಲಿಖಾನ್ ತಾವು ಧಂ ಹೊಡೆಯೋದನ್ನು ಬಹಿರಂಗಪಡಿಸಿದ್ದಾರೆ.

ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆ ಹಿನ್ನೆಲೆಯಲ್ಲಿ ಬಯಲಾದ ಡ್ರಗ್ ಲಿಂಕ್ ನ ವಿಚಾರಣೆಗಾಗಿ ಎನ್ ಸಿ ಬಿ ಎದುರು ನಟಿ ಸಾರಾ ಅಲಿ ಖಾನ್ ಹಾಜರಾಗಿದ್ದರು.

ಎನ್ ಸಿ ಬಿ ಅಧಿಕಾರಿಗಳ ವಿಚಾರಣೆ ವೇಳೆ ತಾವು ಡ್ರಗ್ ಸೇವನೆ ಮಾಡಿಲ್ಲ. ಆದರೆ ಸುಶಾಂತ ಸಿಂಗ್ ರಜಪೂತ್ ಜೊತೆ ಉತ್ತಮ ಸ್ನೇಹವಿದ್ದ ಕಾರಣ ಧಂ ಹೊಡೆಯುತ್ತಿದ್ದೆ ಎಂದು ಹೇಳಿದ್ದಾಗಿ ವರದಿಯಾಗಿದೆ.

ಸುಶಾಂತ ಸಿಂಗ್ ರಜಪೂತ್ ರ ಫಾರ್ಮ್ ಹೌಸ್ ಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ನಾನೂ ಪಾಲ್ಗೊಂಡಿದ್ದೆ ಎಂದು ನಟಿ  ಸಾರಾ ಅಲಿಖಾನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ