ತನಗಿರುವ ಕಾಯಿಲೆಯ ಬಗ್ಗೆ ಅಭಿಮಾನಿಗಳ ಮುಂದೆ ರಿವಿಲ್ ಮಾಡಿದ ನಟಿ ಶೃತಿ ಹಾಸನ್
ಬುಧವಾರ, 22 ಜುಲೈ 2020 (11:26 IST)
ಚೆನ್ನೈ : ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ವಿಚಿತ್ರ ಕಾಯಿಲೆಯೊಂದರಿಂದ ಬಳಲುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿತಮ್ಮ ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ.
ಹೌದು, ಶೃತಿ ಹಾಸನ್ ತಾನು ಒಫಿಡಿಯೋ ಫೋಬಿಯಾ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಒಫಿಡಿಯೋ ಫೋಬಿಯಾ ಅಂದರೆ ಸರಿಸೃಪಗಳನ್ನು ಕಂಡಾಗ ಉಂಟಾಗುವ ಭೀತಿ. ಇದಕ್ಕೆ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆದರೂ ಗುಣವಾಗಿಲ್ಲ ಎಂದು ತಿಳಿಸಿದ್ದಾರೆ.ಇದು ಅವರಿಗೆ ಹುಟ್ಟಿದಾಗಿನಿಂದ ಬಂದಿದ್ದು, ಕುಟುಂಬದವರಿಗೆ ಮಾತ್ರ ತಿಳಿದಿದ್ದ ಈ ಕಾಯಿಲೆ ವಿಚಾರ ಇದೀಗ ಅಭಿಮಾನಗಳ ಮುಂದೆ ನಟಿ ರಿವಿಲ್ ಮಾಡಿದ್ದಾರೆ.