ಹುಡುಗಿಯ ಮೇಲೆ 13 ಮಂದಿಯಿಂದ 2 ವರ್ಷಗಳ ಕಾಲ ಮಾನಭಂಗ

ಗುರುವಾರ, 15 ಏಪ್ರಿಲ್ 2021 (07:14 IST)
ಚೆನ್ನೈ : 14 ವರ್ಷದ ಹುಡುಗಿಯ ಮೇಲೆ ಬಿಎಸ್ ಎನ್ ಎಲ್ ಎಂಜಿನಿಯರ್ ಸೇರಿದಂತೆ 12 ಮಂದಿ ಪುರುಷರು ಸೇರಿ 2 ವರ್ಷಗಳಿಂದ ಮಾನಭಂಗ ಎಸಗಿದ ಘಟನೆ ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಕುಮಾರಪಾಲಯಂ ನಲ್ಲಿ ನಡೆದಿದೆ.

ಸಂತ್ರಸ್ತೆ ತಾಯಿ ದಿನಗೂಲಿ ಕೆಲಸ ಮಾಡುತ್ತಿದ್ದ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ‍ಅಕ್ಕನ ಜೊತೆಗಿದ್ದ ಹುಡುಗಿ ಬೇರೆಯವರ ಮನೆಯ ಮನೆಕೆಲಸ ಮಾಡುತ್ತಿದ್ದಳು. ಆಕೆಯ ಮೇಲೆ ಮನೆಯ ಮಾಲೀಕ ಮತ್ತು ಆತನ ಸ್ನೇಹಿತರು ಸೇರಿ 2 ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು.

ಸಂತ್ರಸ್ತೆ ಅಕ್ಕನ ಜೊತೆ ಮಾತನಾಡುತ್ತಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ.ತಕ್ಷಣ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನುಸೆರೆ ಹಿಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ