ಇದೆಲ್ಲ ಅಮೃತಧಾರೆ ಹೀರೋಯಿನ್ ಸೀರಿಯಲ್ ಬಿಡುವ ಲಕ್ಷಣ

Sampriya

ಬುಧವಾರ, 5 ಮಾರ್ಚ್ 2025 (14:50 IST)
Photo Courtesy X
ಬೆಂಗಳೂರು: ಜೀ ಕನ್ನಡದ ಟಾಪ್‌ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ ವಿಭಿನ್ನ ಕಥಾಹಂದರದ ಮೂಲಕ ಉತ್ತಮ ಟಿಆರ್‌ಪಿಯೊಂದಿಗೆ ಪ್ರಸಾರವಾಗುತ್ತಿದೆ.

ಉತ್ತಮ ಟಿಆರ್‌ಪಿಯೊಂದಿಗೆ ಸೀರಿಯಲ್‌ ಸಾಗುತ್ತಿದ್ದಾಗ ಇದೀಗ ಏಕಾಏಕಿ ಸೀರಿಯಲ್‌ನ ಭೂಮಿಕಾ ಪಾತ್ರಧಾರಿ ನಟಿ ಛಾಯಾಸಿಂಗ್ ಅವರು ಸೀರಿಯಲ್‌ ಬಿಡುತ್ತಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದಕ್ಕೆಲ್ಲ ಕಾರಣ ಸೀರಿಯಲ್‌ನಲ್ಲಿ ಆಗುತ್ತಿರುವ ಸದ್ಯದ ಸ್ಟೋರಿ. ಮಗು ಆಗಲ್ಲ ಎಂದು ಭೂಮಿ, ತನ್ನ ಗಂಡ ಗೌತಮ್‌ಗೆ ಎರಡನೇ ಮದುವೆ ಮಾಡಲು ಹೊರಟಿದ್ದಾಳೆ. ಗೌತಮ್‌ಗೆ ಎರಡನೇ ಮದುವೆಗೆ ಚಿಕ್ಕಮ್ಮ ಶಕುಂತಲಾ ಹುಡುಗಿಯನ್ನು ಹುಡುಕಿದ್ದು ಆಯಿತು. ಆ ಹುಡುಕಿ ಜತೆ ಭೂಮಿಕಾ ಮಾತನಾಡಿ, ಇದೀಗ ಗೌತಮ್ ಹಾಗೂ ಮಧುರಾ ಇಬ್ಬರು ಮಾತುಕತೆಗೆ ಭೇಟಿಯಾಗಿದ್ದಾರೆ.

ಆದರೆ ಗೌತಮ್‌ಗೆ ಮಾತ್ರ ಎರಡನೇ ಮದುವೆ ವಿಚಾರ ಗೊತ್ತಿಲ್ಲ. ಇಂದಿನ ಪ್ರೋಮೋ ನೋಡಿದ ಸೀರಿಯಲ್‌ನ ಅಭಿಮಾನಿಗಳು ಭೂಮಿಕಾ ಪಾತ್ರದಾರಿ ಛಾಯಸಿಂಗ್ ಅವರು ಸೀರಿಯಲ್ ಬಿಡುವ ಲಕ್ಷಣವಿದು. ಅದಕ್ಕಾಗಿ ಇದೀಗ ಗೌತಮ್‌ಗೆ ಎರಡನೇ ಮದುವೆ ಮಾಡಲು ಹೊರಟಿದ್ದಾರೆ ಎಂದು ಲೆಕ್ಕಚಾರ ಹಾಕಿದ್ದಾರೆ.

ಆದರೆ ಜೀ ಚಾನೆಲ್‌ನಿಂದಲೂ, ಸೀರಿಯಲ್ ತಂಡದಿಂದಲೂ ಈ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ