ಅಂಬಿ ಅಂತಿಮ ಸಂಸ್ಕಾರ ಯಾವುದೇ ಸಂಪ್ರದಾಯದಂತೆ ನಡೆಸದಿರಲು ನಿರ್ಧಾರ

ಸೋಮವಾರ, 26 ನವೆಂಬರ್ 2018 (13:06 IST)
ಬೆಂಗಳೂರು : ಅಂಬರೀಶ್ ಅವರ ಅಂತ್ಯಕ್ರಿಯೆಯು ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸಕಲ  ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.

ಆದರೆ ಮೊದಲು ಅಂಬರೀಶ್ ಅಂತಿಮ ಸಂಸ್ಕಾರ ಒಕ್ಕಲಿಗ ಸಂಪ್ರದಾಯದಂತೆ ನಡೆಯುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಅಂಬಿ ಅಂತಿಮ ಸಂಸ್ಕಾರ ಯಾವುದೇ ನಿಗಧಿತ ಸಂಪ್ರದಾಯದಂತೆ ನಡೆಯುವುದಿಲ್ಲ ಎಂದು ತಿಳಿದು ಬಂದಿದೆ.

 

ಅಂಬಿ ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳುತ್ತಿದ್ದ ಕಾರಣ ಖ್ಯಾತ ವೈದಿಕ ಡಾ. ಭಾನುಪ್ರಕಾಶ್ ರವರು ಸುಮಲತಾ ಮತ್ತು ಅಭಿಶೇಕ್ ಬಳಿ ಮನವಿ ಮಾಡಿದ ಹಿನ್ನಲೆಯಲ್ಲಿ ಅಂಬಿ ಅಂತಿಮ ಸಂಸ್ಕಾರ ಯಾವುದೇ ನಿಗದಿತ ಸಂಪ್ರದಾಯದಂತೆ ನಡೆಸದಿರಲು ನಿರ್ಧರಿಸಲಾಗಿದೆ.

 

ಪಂಚಭೂತಗಳಲ್ಲಿ ಲೀನ ಆಗುವಂತೆ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಅಂತಿಮ ಸಂಸ್ಕಾರದ ವಿಧಿ ವಿಧಾನದಲ್ಲಿ ಮೂರು ಅಥವಾ ನಾಲ್ಕು ಬ್ರಾಹ್ಮಣರು ಭಾಗಿಯಾಗಲಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ