ಅಂಬರೀಶ್ ಹಣೆಗೆ ಮಂಡ್ಯದ ಮಣ್ಣಿನ ತಿಲಕವಿಟ್ಟ ಪತ್ನಿ ಸುಮಲತಾ
ಇದಕ್ಕೂ ಮೊದಲು ಅಂಬರೀಶ್ ಗೆ ಮಂಡ್ಯದ ಮಣ್ಣಿನ ತಿಲಕವಿಟ್ಟು ಪತ್ನಿ ಸುಮಲತಾ ಅಗಲಿದ ಪತಿಗೆ ಗೌರವ ಸಮರ್ಪಿಸಿದ್ದಾರೆ. ಬಳಿಕ ಮಂಡ್ಯದ ಜನತೆಗೆ ಸುಮಲತಾ ಹಾಗೂ ಪುತ್ರ ಅಭಿಷೇಕ್ ಕೈ ಮುಗಿದು ನಮನ ಸಲ್ಲಿಸಿದರು. ಕೆಲವೇ ಕ್ಷಣಗಳಲ್ಲಿ ಅಂಬರೀಶ್ ಪಾರ್ಥಿವ ಶರೀರ ಬೆಂಗಳೂರು ತಲುಪಲಿದ್ದು, ಬಳಿಕ ಆಂಬ್ಯುಲೆನ್ಸ್ ಮೂಲಕ ಕಂಠೀರವ ಸ್ಟೇಡಿಯಂನತ್ತ ತೆರಳಲಿದೆ.