ಮೆಗಾ ಕುಟುಂಬಕ್ಕೆ ಏಪ್ರಿಲ್ 9 ಸ್ಪೇಷಲ್ ಡೇ. ಯಾಕೆ ಗೊತ್ತಾ?

ಬುಧವಾರ, 14 ಏಪ್ರಿಲ್ 2021 (12:04 IST)
ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ  ವಕೀಲ್ ಸಾಬ್ ಚಿತ್ರ ಏಪ್ರಿಲ್ 9ರಂದು ಬಿಡುಗಡೆಗೊಂಡು ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.

ಪವನ್ ಕಲ್ಯಾಣ್ ಅವರ ಪುನರಾಗಮನದ ಚಿತ್ರವಾದ ವಕೀಲ್ ಸಾಬ್ ಚಿತ್ರ ಪಿಂಕ್ ಚಿತ್ರದ ರಿಮೇಕ್ ಆಗಿದ್ದು, ನಿರ್ದೇಶಕ ವೇಣು ಶ್ರೀರಾಮ್ ನಿರ್ದೇಶಿಸಿದ್ದಾರೆ. ಇದು ಜಗತ್ತಿನಾದ್ಯಂತ ಭಾರೀ ಯಶಸ್ಸು ಕಾಣುತ್ತಿದೆ.

ಈ ನಡುವೆ ಹಲವು ವರ್ಷಗಳ ಹಿಂದೆ ಮೆಗಾ ಸ್ಟಾರ್ ಚಿರಂಜೀವಿ ಅವರ ಬ್ಲಾಕ್ಬಸ್ಟರ್ ಘರಾನಾ ಮೊಗಡು ಚಿತ್ರ ಏಪ್ರಿಲ್ 9ರಂದು ಬಿಡುಗಡೆಯಾಗಿ ಭಾರೀ ಯಶಸ್ಸನ್ನು ಕಂಡಿತ್ತು. ಹಾಗಾಗಿ ಈ ದಿನಾಂಕವು ಮೆಗಾ ಕುಟುಂಬದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ