AR Rehman Birthday: ಎಆರ್ ರೆಹಮಾನ್ ಟಾಪ್ 10 ಹಾಡುಗಳು, ಇದರಲ್ಲಿ ನಿಮ್ಮ ಫೇವರಿಟ್ ಯಾವುದು
ರೋಜಾ ಸಿನಿಮಾದಿಂದ ಇತ್ತೀಚೆಗಿನವರೆಗೂ ಎಆರ್ ರೆಹಮಾನ್ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ಹಾಡುಗಳಲ್ಲಿ ಸಣ್ಣ ಮ್ಯೂಸಿಕ್ ಇನ್ಸ್ಟ್ರುಮೆಂಟ್ ನ ಶಬ್ಧವೂ ಕೇಳುಗರ ಗಮನ ಸೆಳೆಯುವುದೇ ವಿಶೇಷ. ಅವರ ಹೆಚ್ಚಿನ ಹಾಡುಗಳಲ್ಲಿ ತಬಲಾ, ಹಾರ್ಮೋನಿಯಂ ಸೇರಿದಂತೆ ಸಾಂಪ್ರದಾಯಿಕ ಗಝಲ್ ಶೈಲಿಯ ಝಲಕ್ ಕಾಣಬಹುದಾಗಿದೆ. ಈ ಕಾರಣಕ್ಕೇ ಕೇಳಗರಿಗೆ ಅವರ ಹಾಡುಗಳು ಇಷ್ಟವಾಗುತ್ತದೆ.