ಬ್ಯಾಂಕಾಕ್ ನಲ್ಲಿ ಶುರುವಾಗುತ್ತಾ ಪುಷ್ಪ 2 ಶೂಟಿಂಗ್?

ಗುರುವಾರ, 3 ನವೆಂಬರ್ 2022 (08:40 IST)
Photo Courtesy: Twitter
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ 2 ಸಿನಿಮಾ ಶೂಟಿಂಗ್ ಆರಂಭದ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.
 

ಈಗಾಗಲೇ ಶೂಟಿಂಗ್ ಗೆ ತಯಾರಿ ನಡೆಸುತ್ತಿರುವ ಫೋಟೋವನ್ನು ಚಿತ್ರತಂಡ ಪ್ರಕಟಿಸಿತ್ತು. ಇದೀಗ ನವಂಬರ್ 13 ರಿಂದ ಚಿತ್ರೀಕರಣ ಶುರು ಮಾಡುತ್ತಿರುವುದಾಗಿ ಹೇಳಿದೆ.

ಇದಕ್ಕೂ ಮೊದಲು ಹೈದರಾಬಾದ್ ನಲ್ಲಿ ಟೀಸರ್ ಗೆ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ. ಮೊದಲ ಹಂತದ ಚಿತ್ರೀಕರಣ ಬ್ಯಾಂಕಾಕ್ ನಲ್ಲಿ ನಡೆಯಲಿದೆ ಎಂಬ ಸುದ್ದಿಯಿದೆ. ಪುಷ್ಪ 2 ಸಿನಿಮಾಗಾಗಿ ಅಲ್ಲು ಅರ್ಜುನ್ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ರಶ್ಮಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದು, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ