ಕಾಂತಾರ ನೋಡಿದ್ರಾ ಎಂದಿದ್ದಕ್ಕೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ಹೀಗಿತ್ತು!
ಪರಭಾಷೆಗಳಿಗೆ ಹೋದ ಮೇಲೆ ಕನ್ನಡ ಸಿನಿಮಾಗಳಿಂದ ಅವರು ಸಂಪೂರ್ಣವಾಗಿ ದೂರವಾಗಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಮೆಂಟ್ ಮುರಿದುಕೊಂಡ ಮೇಲಂತೂ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಲೇ ಇರುತ್ತಾರೆ.
ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಶ್ಮಿಕಾಗೆ ಕನ್ನಡ ಛಾಯಾಗ್ರಾಹಕರೊಬ್ಬರು ಕನ್ನಡದಲ್ಲಿ ಫೋಟೋಗ್ರಾಫರ್ ಒಬ್ಬರು ಕಾಂತಾರ ಸಿನಿಮಾ ನೋಡಿದ್ರಾ ಎಂದು ಕನ್ನಡದಲ್ಲೇ ಪ್ರಶ್ನಿಸಿದ್ದಾರೆ. ಇದಕ್ಕೆ ರಶ್ಮಿಕಾ ಈಗ ಕನ್ನಡದಲ್ಲಿ ಮಾತಾಡ್ಬೇಕಾ? ಎಂದು ನಕ್ಕಿದ್ದಾರೆ. ಬಳಿಕ ಹಿಂದಿ ಛಾಯಾಗ್ರಾಹಕರೊಬ್ಬರು ರಶ್ಮಿಕಾ ಜೀ ಕಾಂತಾರ ಸಿನಿಮಾ ನೋಡಿದ್ರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ ಇನ್ನೂ ನೋಡಿಲ್ಲ. ಟೈಮ್ ಆದಾಗ ನೋಡ್ಬೇಕು ಎಂದಿದ್ದಾರೆ. ರಶ್ಮಿಕಾ ಉತ್ತರ ನೋಡಿ ಈಗ ನೆಟ್ಟಿಗರು ಮತ್ತೆ ಟ್ರೋಲ್ ಮಾಡಿದ್ದಾರೆ.