ನೋವು ಕೊಟ್ಟವರ ಬಗ್ಗೆ ಮೌನ ಮುರಿದ ರಶ್ಮಿಕಾ ಮಂದಣ್ಣ
ಅವರು ಏನೇ ಮಾಡಿದರೂ ಟ್ರೋಲ್ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನನ್ನ ಟೀಚರ್ ಬಲವಂತಕ್ಕೆ ಅಡಿಷನ್ ಗೆ ಹೋಗಲು ಒಪ್ಪಿಕೊಂಡೆ ಎಂಬ ಮಾತನ್ನೂ ಕೆಲವರು ಟ್ರೋಲ್ ಮಾಡಿದ್ದರು. ಇದರ ಬೆನ್ನಲ್ಲೇ ರಶ್ಮಿಕಾ ಟ್ರೋಲಿಗರಿಂದ ತಮಗಾಗುತ್ತಿರುವ ನೋವನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗಿನ ವರ್ಷಗಳಲ್ಲಿ ಕೆಲವು ವಿಚಾರಗಳು ನನಗೆ ನೋವುಂಟು ಮಾಡುತ್ತಿದೆ. ಈ ಬಗ್ಗೆ ಮೊದಲೇ ನಾನು ಮಾತನಾಡಬೇಕಿತ್ತು. ಟ್ರೋಲ್ ಮತ್ತು ನೆಗೆಟಿವಿಟಿ ನಾನು ಇರುವ ಕ್ಷೇತ್ರದಲ್ಲಿ ಸಹಜ. ನನ್ನನ್ನು ನಿಮಗೆ ಇಷ್ಟವಿಲ್ಲ ಎಂದರೆ ನೆಗೆಟಿವಿಟಿ ಹಬ್ಬಿಸಬಹುದು ಎಂದಲ್ಲ. ನಿಮ್ಮನ್ನು ರಂಜಿಸಲು ಶ್ರಮಪಡುತ್ತೇನೆ. ನಾನು ಹೇಳಿಲ್ಲದೇ ಇರುವ ವಿಚಾರಕ್ಕೂ ನನ್ನ ಟ್ರೋಲ್ ಮಾಡುತ್ತಿರುವುದು ನೋವಿನ ವಿಚಾರ. ಸಂದರ್ಶನಗಳಲ್ಲಿ ನಾನು ಹೇಳುವುದನ್ನು ತಿರುಚಲಾಗುತ್ತದೆ. ನನಗೆ ಮತ್ತು ನನ್ನ ಸಂಬಂಧಗಳಿಗೆ ಹಾನಿ ಆಗುವ ವಿಚಾರಗಳನ್ನು ಹರಡಲಾಗುತ್ತದೆ. ಒಳ್ಳೆಯ ಟೀಕೆಗಳನ್ನು ಸ್ವೀಕರಿಸುತ್ತೇನೆ. ಆದರೆ ನೆಗೆಟಿವಿಟಿಯಿಂದ ಏನು ಸಾಧಿಸಲು ಸಾಧ್ಯ? ಎಂದು ರಶ್ಮಿಕಾ ನೋವು ತೋಡಿಕೊಂಡಿದ್ದಾರೆ. ಅವರ ಈ ಪೋಸ್ಟರ್ ಗೆ ಸಿನಿಮಾ ಸ್ನೇಹಿತರು ಬೆಂಬಲ ವ್ಯಕ್ತಪಡಿಸಿದ್ದಾರೆ.