ಅಮೆರಿಕಾದ ಸಿನಿಲಾಂಚ್ನಲ್ಲಿ ಬಬ್ರೂ ದಾಖಲೆ!

ಬುಧವಾರ, 4 ಡಿಸೆಂಬರ್ 2019 (13:55 IST)
ಈಗ ಕನ್ನಡ ಚಿತ್ರಗಳಿಗೆ ದೇಶ ವಿದೇಶ ಮಟ್ಟದಲ್ಲಿಯೂ ಒಂದು ಥರದ ಕಿಮ್ಮತ್ತು ಬಂದಿದೆ. ಒಂದು ಕಾಲದಲ್ಲಿ ಯಾವ ಜನ ಕನ್ನಡ ಚಿತ್ರಗಳೆಂದರೆ ಅಸಡ್ಡೆಯ ಭಾವ ಹೊಂದಿದ್ದರೋ ಅವರೇ ಇಂದು ಕನ್ನಡ ಚಿತ್ರರಂಗದತ್ತ ಬೆರಗಾಗಿ ನೋಡುವಂಥಾ ವಾತಾವರಣ ಸೃಷ್ಟಿಯಾಗಿ ಬಿಟ್ಟಿದೆ.

ಇದೇನು ಒಂದೇ ಸಲಕ್ಕೆ ಘಟಿಸಿದ ಪವಾಡವಲ್ಲ. ಹಂತ ಹಂತವಾಗಿ ಕನ್ನಡ ಚಿತ್ರಗಳು ಗುಣ ಮಟ್ಟ ಕಾಯ್ದುಕೊಂಡು ಬಂದಿದ್ದರ ಪ್ರತಿಫಲ. ಈ ಪ್ರಕ್ರಿಯೆಗೆ ದೊಡ್ಡ ಕೊಡುಗೆ ನೀಡುವಂತೆ ಮೂಡಿ ಬಂದಿರುವ ಚಿತ್ರ ಬಬ್ರೂ. ಇದು ಸಂಪೂರ್ಣವಾಗಿ ಅಮೆರಿಕಾದಲ್ಲಿಯೇ ಚಿತ್ರೀಕರಣಗೊಂಡಿರುವ ಮೊದಲ ಕನ್ನಡ ಚಿತ್ರವೆಂಬ ದಾಖಲೆ ಬರೆದಿದೆ. ವಿದೇಶಿ ನೆಲದಲ್ಲಿಯೇ ಮತ್ತೊಂದು ಮಹಾ ದಾಖಲೆಯನ್ನೂ ಬಬ್ರೂ ಸಾಧ್ಯವಾಗಿಸಿದ್ದಾನೆ.
ಅಮೆರಿಕಾದಂಥಾ ದೇಶಗಳಲ್ಲಿ ಕನ್ನಡ ಚಿತ್ರ ಪ್ರದರ್ಶನ ನಡೆಯುತ್ತದೆ ಎಂದರೇನೇ ಕನ್ನಡಿಗರೆಲ್ಲ ರೋಮಾಂಚಿತರಾಗುತ್ತಾರೆ. ಒಂದು ವೇಳೆ ಪ್ರದರ್ಶನಗೊಂಡರೂ ಐವತ್ತು ಜನರನ್ನು ದಾಟಿಕೊಳ್ಳೋದು ಕಷ್ಟ. ಆದರೆ ಅಲ್ಲಿನ ಸಿನಿ ಲಾಂಚ್ನ ಏಳು ದೊಡ್ಡ ತೆರೆಗಗಳಲ್ಲಿ ಬಬ್ರೂ ಚಿತ್ರ ಪ್ರದರ್ಶನ ಕಂಡಿದೆ. ಇದರ ಟಿಕೆಟುಗಳು ಕೂಡಾ ಅತ್ಯಂತ ವೇಗವಾಗಿ ಸೇಲಾಗಿವೆ. ನವೆಂಬರ್ ಎರಡರಂದು ನಡೆದ ಈ ಪ್ರದರ್ಶನವನ್ನು ಇನ್ನೂರಕ್ಕೂ ಹೆಚ್ಚುಮಂದಿ ಅಮೆರಿಕನ್ನಡಿಗರು ನೋಡಿದ್ದಾರೆ. ಎಲ್ಲರೂ ರೋಮಾಂಚಿತರಾಗಿ ಮೆಚ್ಚಿ ಕೊಂಡಾಡಿದ್ದಾರೆ. ಇದರಿಂದ ಚಿತ್ರತಂಡ ಖುಷಿಗೊಂಡಿದೆ.
ಈ ಚಿತ್ರವನ್ನು ಸುಜಯ್ ರಾಮಯ್ಯ ನಿರ್ದೇಶನ ಮಾಡಿದ್ದಾರೆ. ಲೋಕೇಶ್ ಬಿ.ಎಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಯುಗ ಕ್ರಿಯೇಷನ್ಸ್ ಹಾಗೂ ಸುಮನ್ನಗರ್ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ಬಬ್ರೂ ನಿರ್ಮಾಣಗೊಂಡಿದೆ. ಇಲ್ಲಿ ಸುಮನ್ ನಗರ್ಕರ್ ಮತ್ತು ಮಹಿ ಹಿರೇಮಠ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಮೋಜಾ, ರೇ ಟೊಸ್ಟಾದೋ, ಪ್ರಕೃತಿ ಕಶ್ಯಪ್, ಗಾನಾ ಭಟ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಯುಗ ಕ್ರಿಯೇಷನ್ಸ್ ಹಾಗೂ ಸುಮನ್ನಗರ್ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಇದೇ ಡಿಸೆಂಬರ್ ಆರರಂದು ತೆರೆಗಾಣಲು ರೆಡಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ