ಬಿಗ್ ಬಾಸ್ ಗೆದ್ದ ಶೈನ್ ಶೆಟ್ಟಿಗೆ ಈ ಇಬ್ಬರು ಹೀರೋಯಿನ್ ಹೇಳಿದ್ದೇನು ಗೊತ್ತಾ?

ಮಂಗಳವಾರ, 4 ಫೆಬ್ರವರಿ 2020 (09:24 IST)
ಬೆಂಗಳೂರು: ಈ ಬಾರಿಯ ಬಿಗ್ ಬಾಸ್ ಆವೃತ್ತಿ ಗೆದ್ದ ಶೈನ್ ಶೆಟ್ಟಿಗೆ ಹಲವೆಡೆಯಿಂದ ಅಭಿನಂದನೆಗಳ ಸುರಿಮಳೆಯೇ ಆಗುತ್ತಿದೆ. ಶೈನ್ ಗೆ ಇದು ಒಂದು ರೀತಿಯಲ್ಲಿ ಹೊಸ ಬದುಕು ಸಿಕ್ಕಿದಂತೆ ಎನ್ನಬಹುದು.


ಇನ್ನು ಶೋ ಗೆದ್ದ ಶೈನ್ ಗೆ ಅವರ ಹಳೆಯ ಹೀರೋಯಿನ್ ಗಳು ಶುಭ ಹಾರೈಸಿದ್ದಾರೆ. ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ಚಂದು ಆಗಿ ಕೆಲವು ಕಾಲ ಪಾತ್ರ ಮಾಡಿದ್ದ ಶೈನ್ ಗೆ ಆ ಧಾರವಾಹಿಯ ನಾಯಕಿಯರಾಗಿದ್ದ ನೇಹಾ ಗೌಡ ಮತ್ತು ಕವಿತಾ ಗೌಡ ಸಾಮಾಜಿಕ ಜಾಲತಾಣದ ಮೂಲಕ ವಿಶೇಷವಾಗಿ ಅಭಿನಂದಿಸಿದ್ದಾರೆ.

ಈ ಮೂಲಕ ನಿನ್ನ ಹೊಸ ಜೀವನಕ್ಕೆ ಗುಡ್ ಲಕ್ ಎಂದು ಗೊಂಬೆ ಅಲಿಯಾಸ್ ನೇಹಾ ಗೌಡ ವಿಶ್ ಮಾಡಿದರೆ ಕವಿತಾ ಕೂಡಾ ಅಭಿನಂದನೆಗಳು ಶೈನ್ ಎಂದು ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ