BigBoss Season11: ಟಾಸ್ಕ್ ವಿಚಾರಕ್ಕೆ ಕೈ ಕೈ ಮಿಲಾಯಿಸಲು ಮುಂದಾದ ರಜತ್-ಉಗ್ರಂ ಮಂಜು
ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ರಜತ್ ಹಾಗೂ ಉಗ್ರಂ ಮಂಜು ನಡುವೆ ಮಾತಿನ ಚಕಮಕಿ ಜೋರಾಗಿ ನಡೆದಿದೆ.
ಕಳೆದ ವಾರ ಧನರಾಜ್ ನಡುವೆ ರಜತ್ ಮಾಡಿದ ಗಲಾಟೆ ವಿಚಾರವಾಗಿ ಕಿಚ್ಚ ಸುದೀಪ್ ಅವರು ಈಗಾಗಲೇ ಖಡಕ್ ವಾರ್ನಿಂಗ್ ನೀಡಿ, ಶಿಕ್ಷೆ ನೀಡಿದ್ದರು. ಆದರೂ ಇದೀಗ ಮತ್ತೆ ಮಂಜು ಹಾಗೂ ರಜತ್ ಅವರ ನಡುವೆ ಮಾರಾಮಾರಿಯಾಗಿದೆ. ಹಾಗಾದ್ರೆ ಈ ವಾರಾಂತ್ಯವು ಕೂಡ ರಜತ್‌ಗೆ ಸುದೀಪ್ ಬೆಂಡೆತ್ತುತ್ತಾರಾ? ಕಾದುನೋಡಬೇಕಿದೆ.