ಬಿಗ್‌ಬಾಸ್‌ನಲ್ಲಿ ಹುಡುಗಿಯರ ಮನಸ್ಸು ಕದ್ದ ಶಿಶಿರ್‌ಗೆ ರಿಯಲ್‌ನಲ್ಲಿ ಮದುವೆಯಾಗಿದೆಯಾ

Sampriya

ಸೋಮವಾರ, 9 ಡಿಸೆಂಬರ್ 2024 (18:31 IST)
Photo Courtesy X
ಬಿಗ್ ಬಾಸ್‌ ಕನ್ನಡ ಸೀಜನ್‌ 11 ಆರಂಭವಾಗಿ ಎರಡು ತಿಂಗಳು ಕಳೆದು ಮೂರನೇ ತಿಂಗಳಿಗೆ ಕಾಲಿಟ್ಟಿದ್ದು, ಪ್ರೇಕ್ಷಕರಿಗೆ ಈಗಾಗಲೇ ಕೆಲವರು ಫೆವರೆಟ್ ಸ್ಪರ್ಧಿಗಳಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೀರಿಯಲ್ ನಟ ಶಿಶಿರ್ ಅವರಿಗೂ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಜನ್‌ 11ರಲ್ಲಿ ಅನೇಕ ಧಾರಾವಾಹಿ ನಟ-ನಟಿಯರೇ ಹೆಚ್ಚಿದ್ದು, ಈ ಪೈಕಿ ಶಿಶಿರ್‌ ಶಾಸ್ತ್ರಿ ಕೂಡ ಇಬ್ಬರು. ಅನೇಕ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ಶಿಶಿರ್‌ ಇದೀಗ ಬಿಗ್ ಬಾಸ್‌ ಕನ್ನಡ ಸೀಜನ್‌ 11ರ ಸೆಂಟರ್‌ ಆಫ್‌ ಆಟ್ರಾಕ್ಷನ್‌ ಕೂಡ ಹೌದು.

ಬಿಗ್‌ಬಾಸ್ ಮನೆಯಲ್ಲಿ ಸ್ನೇಹ, ಸಂಬಂಧದೊಂದಿಗೆ ಬೆಸೆದುಕೊಂಡು ಆಟವಾಡುತ್ತಿರುವ ಶಿಶಿರ್ ಅವರು ಮನೆಮಂದಿಯಿಂದನೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಸದ್ಯ ಬಹುತೇಕರ ಮೆಚ್ಚಿನ ಸ್ಪರ್ಧಿಯಾಗಿರುವ ಶಿಶಿರ್‌ ವೈಯಕ್ತಿಕ ಜೀವನದ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲ ಅನೇಕರಿಗಿದೆ.

ತಮ್ಮ ಗುಣ ನಡತೆ ಮೂಲಕ ಹುಡುಗಿಯರ ಮನಸ್ಸನ್ನು ಗೆಲ್ಲುತ್ತಿರುವ ಶಿಶಿರ್‌ಗೆ ಮದುವೆಯಾಗಿದೆಯಾ, ಗರ್ಲ್ ಫ್ರೆಂಡ್ ಇದ್ದಾರಾ ಎನ್ನುವ ಪ್ರಶ್ನೆ ಅನೇಕರಲ್ಲಿದೆ.

ಸದ್ಯ ಸಿಂಗಲ್ ಆಗಿರುವ ಶಿಶಿರ್‌ಗೆ ಈ ಹಿಂದೆ ಮದುವೆಯಾಗಿತ್ತು. ಮತ್ತು ವಿಚ್ಛೇಧನ ಪಡೆದಿರುವ ಕಾರಣ ಸದ್ಯ ಒಂಟಿಯಾಗಿದ್ದಾರೆ.

ಶಿಶಿರ್ ಅವರ ಮಾಜಿ ಪತ್ನಿ ಕೂಡಾ ನಟಿಯಾಗಿದ್ದು, ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧಿಯಾಗಿ, ಜನಮನ್ನಣೆ ಗಳಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ