ಪ್ರೀತಿಸಿದ ಯುವತಿ ಜತೆ ಸದ್ದಿಲ್ಲದೆ ಎಂಗೇಜ್‌ ಆದ ಬಿಗ್‌ಬಾಸ್ ಸ್ಪರ್ಧಿ ರಂಜಿತ್

Sampriya

ಗುರುವಾರ, 6 ಮಾರ್ಚ್ 2025 (19:05 IST)
Photo Courtesy X
ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 11ರ ಸ್ಪರ್ಧಿ ರಂಜಿತ್ ಅವರು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪ್ರೀತಿಸಿದ ಹುಡುಗಿಯ ಜತೆಗೆ ಸದ್ದಿಲ್ಲದೆ ರಂಜಿತ್ ಅವರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ.

ಮಾನಸ ಗೌಡ ಜತೆಗೆ ರಂಜಿತ್ ನಿಶ್ಚಿತಾರ್ಥವಾಗಿದ್ದು, ನಟ ಶಿಶಿರ್‌ ಸೇರಿದಂತೆ ಬಿಗ್ಬಾಸ್ ಸೀಸನ್ 11ರ ಕೆಲ ಸ್ಪರ್ಧಿಗಳು, ಧಾರಾವಾಹಿ ನಟ-ನಟಿಯರು ಹಾಗೂ ಕೆಲವೇ ಆಪ್ತರಷ್ಟೇ ಭಾಗಿಯಾಗಿದ್ದಾರೆ.

ಫ್ಯಾಶನ್ ಡಿಸೈನ್‌ ಆಗಿರುವ ಮಾನಸಗೌಡ ಅವರು ಕಂಟೆಂಟ್ ಕ್ರಿಯೇಟರ ಆಗಿಯೂ ಇದ್ದಾರೆ. ಎಂಗೇಜ್‌ಮೆಂಟ್‌ ಫೋಟೋಗಳನ್ನು ರಂಜಿತ್ ಹಾಗೂ ಮಾನಸ ಗೌಡ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು, ಸಹಕಲಾವಿದರು ಹೊಸ ಜೋಡಿಗೆ ಶುಭಹಾರೈಸುತ್ತಿದ್ದಾರೆ.

ಬಿಗ್‌ಬಾಸ್‌ ಸೀಸನ್ 11ಕ್ಕೆ ಪ್ರಬಲ ಸ್ಪರ್ಧಿಯಾಗಿ ಕಾಲಿಟ್ಟ ರಂಜಿತ್ ಅವರು ಸಹಸ್ಪರ್ದಿ ಲಾಯರ್ ಜಗದೀಶ್ ಜತೆಗಿನ ತಳ್ಳಾಟದಿಂದ ದೊಡ್ಮನೆಯಿಂದ ಹೊರಬಂದಿದ್ದರು.  ಇದರಿಂದ ಅವರ ಅಭಿಮಾನಿಗಳಿಗೆ ಬೇಸರವು ಆಗಿತ್ತು.  ಇನ್ನೂ ಗ್ರ್ಯಾಂಡ್‌ ಫಿನಾಲೆಯಲ್ಲಿ ಗೆಳೆಯ ತ್ರಿವಿಕ್ರಮ್‌ಗಾಗಿ ರಂಜಿತ್ ಡ್ಯಾನ್ಸ್ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ