Annaiah serial:ಗುಂಡಮ್ಮ, ಜಿಮ್ ಸೀನ ಫಸ್ಟ್ ನೈಟ್ ಗೆ ಫ್ಯಾನ್ಸ್ ಸಖತ್ ರಿಯಾಕ್ಷನ್
ಸಾಮಾನ್ಯವಾಗಿ ಸೀರಿಯಲ್ ಗಳಲ್ಲಿ ನಾಯಕ-ನಾಯಕಿ ಇಷ್ಟವಿಲ್ಲದೇ, ಯಾರದ್ದೋ ಒತ್ತಡಕ್ಕೆ ಮಣಿದು ಮದುವೆಯಾಗಿದ್ದರೆ ಫಸ್ಟ್ ನೈಟ್ ದಿನ ಪ್ಯಾಥೋ ಸಾಂಗ್ ಪ್ಲೇ ಆಗುತ್ತಿರುತ್ತದೆ. ಇಬ್ಬರಲ್ಲಿ ಒಬ್ಬರು ಮುಖ ಊದಿಸಿಕೊಂಡು ಕೆಳಗೆ ಚಾಪೆ ಹಾಸಿಕೊಂಡು ಮಲಗುವುದು ಸಾಮಾನ್ಯ.
ಆದರೆ ಅಣ್ಣಯ್ಯ ಧಾರವಾಹಿಯಲ್ಲಿ ಜಿಮ್ ಸೀನ-ಗುಂಡಮ್ಮ ಯಾರದ್ದೋ ಒತ್ತಾಯಕ್ಕೆ ಕಟ್ಟುಬಿದ್ದು ಮದುವೆಯಾದರೂ ಫಸ್ಟ್ ನೈಟ್ ಮಾತ್ರ ಸಖತ್ ಆಗಿ ಚಿತ್ರೀಕರಿಸಲಾಗಿದೆ. ಇಬ್ಬರೂ ಬೇಜಾರು ಮಾಡಿಕೊಂಡು ಬೇರೆ ಬೇರೆ ಮಲಗಬಹುದು ಎಂಬುದು ವೀಕ್ಷಕರ ಊಹೆಯಾಗಿತ್ತು.
ಆದರೆ ಇಬ್ಬರೂ ಮಂಚ ಕಿತ್ತು ಬೀಳುವ ರೇಂಜ್ ಗೆ ಜಗಳ ಮಾಡಿಕೊಂಡು ಈ ದೃಶ್ಯಕ್ಕೆ ಸಖತ್ ಕಾಮಿಡಿ ಟಚ್ ನೀಡಲಾಗಿದೆ. ಇದು ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ಸದ್ಯ ಬೇರೆ ಸೀರಿಯಲ್ ಥರಾ ಇಲ್ಲ, ಇದೊಂಥರಾ ಮಜಾ ಕೊಡ್ತಿದೆ. ಇಬ್ಬರನ್ನೂ ಇದೇ ರೀತಿ ತೋರಿಸಿ ಎಂದು ವೀಕ್ಷಕರು ಒತ್ತಾಯಿಸಿದ್ದಾರೆ.