ಸಿನಿಮಾದಲ್ಲಿ ಬಣ್ಣ ಹಚ್ಚಿದ ಬಿಎಸ್ ಯಡಿಯೂರಪ್ಪ!
ನೈಜ ಘಟನೆಯಾಧಾರಿತ ತನುಜಾ ಎನ್ನುವ ಟೈಟಲ್ ನ ಸಿನಿಮಾವೊಂದು ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ. ಈ ಸಿನಿಮಾದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪಾತ್ರ ಮಾಡಿದ್ದಾರೆ.
ಈ ಹಿಂದೆ ಲಾಕ್ ಡೌನ್ ಸಮಯದಲ್ಲಿ ಪರೀಕ್ಷೆ ಬರೆಯಲು ನೂರಾರು ಕಿ.ಮೀ. ಪ್ರಯಾಣ ಮಾಡಿ ಗಮನ ಸೆಳೆದಿದ್ದ ಹುಡುಗಿಯ ಕತೆ ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಆ ಸಂದರ್ಭದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ಅವರನ್ನೇ ಈಗ ಸಿಎಂ ಪಾತ್ರದಲ್ಲಿ ಅಭಿನಯಿಸಲು ಚಿತ್ರತಂಡ ಕೇಳಿಕೊಂಡಿದೆ. ಅದರಂತೆ ಅವರು ತಮ್ಮ ಪಾಲಿನ ಪಾತ್ರ ಮಾಡಿದ್ದಾರೆ.