ಅವಹೇಳನ ಸುದ್ದಿ ಹರಡದಂತೆ ಕೋರ್ಟ್ ನಿಂದ ತಡೆ ತಂದ ನಟ ಜಗ್ಗೇಶ್
ಇತ್ತೀಚೆಗೆ ಜಗ್ಗೇಶ್ ನೀಡಿದ ಕೆಲವು ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಗೊಳಗಾಗಿದೆ. ವ್ತೂರು ಸಂತೋಷ್ ಬಗ್ಗೆ ಜಗ್ಗೇಶ್ ನೀಡಿದ ಹೇಳಿಕೆಗೆ ಅವರಿಗೆ ಪ್ರತಿಭಟನೆ ಬಿಸಿ ಎದುರಾಗಿತ್ತು. ಇದದರ ವಿರುದ್ಧ ಅವರು ಕೋರ್ಟ್ ಮೊರೆ ಹೋಗಿದ್ದರು.
ಇದೀಗ ತಮ್ಮ ಬಗ್ಗೆ ಸುಳ್ಳು, ಅವಹೇಳನಕಾರೀ ಸುದ್ದಿ ಪ್ರಕಟಿಸುವುದರ ವಿರುದ್ಧ ತಡೆಯಾಜ್ಞೆ ನೀಡಲು ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಅದರಂತೆ ಕೋರ್ಟ್ ಈಗ ಜಗ್ಗೇಶ್ ಬಗ್ಗೆ ಅಪಪ್ರಚಾರ ಮಾಡದಂತೆ ತಡೆಯಾಜ್ಞೆ ನೀಡಿದೆ. ಆ ಮೂಲಕ ಜಗ್ಗೇಶ್ ತಮ್ಮ ಬಗ್ಗೆ ಅಪಪ್ರಚಾರ ಮಾಡುವವರಿಗೆ ತಕ್ಕ ಉತ್ತರ ನೀಡಿದೆ.
ಇದು ತಾತ್ಕಾಲಿಕ ಆದೇಶವಾಗಿದ್ದು, ಏಪ್ರಿಲ್ 25 ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ. ರಾಜ್ಯಸಭಾ ಸದಸ್ಯರೂ ಆಗಿರುವ ಜಗ್ಗೇಶ್ ಬಗ್ಗೆ ಅಪಪ್ರಚಾರ ಮಾಡದಂತೆ ಸಿಟಿ ಸಿವಿಲ್ ಮತ್ತು ಸೆಷನ್ ಕೋರ್ಟ್ ಆದೇಶ ನೀಡಿದೆ. ಅವರ ಪರವಾಗಿ ಅವರ ಪರ ವಕೀಲರು ನ್ಯಾಯಾಲಯಕ್ಕೆ ಎಲ್ಲವನ್ನೂ ವಿವರಿಸಿದ್ದಾರೆ.