ಕ್ರೇಜಿಸ್ಟಾರ್ ರವಿಚಂದ್ರನ್ ಕ್ರೇಜ್ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ
ರವಿಚಂದ್ರ ನ್ ಇಂದು 63 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈಗಲೂ ಅವರ ಸಿನಿಮಾ ಹುಚ್ಚು ಕೊಂಚವೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ಬೇರೆಯವರ ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು. ಆದರೆ ಈಗಲೂ ಅವರಲ್ಲಿ ಸಿನಿಮಾ ಕನಸು ಕಮರಿಲ್ಲ.
ಪ್ರೇಮಲೋಕ 2 ಮಾಡಲು ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದಾರೆ. ಮಕ್ಕಳನ್ನು ಚಿತ್ರರಂಗದಲ್ಲಿ ಬೆಳೆಸಬೇಕೆಂಬ ಕನಸಿದೆ. ನಿರ್ಮಾಪಕನಾಗಿ ಎಷ್ಟೋ ಜನರಿಗೆ ಅನ್ನದಾತರಾಗಿದ್ದ ರವಿಚಂದ್ರನ್ ಸಿನಿಮಾದಲ್ಲಿಯೇ ಗಳಿಸಿ ಸಿನಿಮಾಕ್ಕೇ ನೀಡಿದ ಕನಸುಗಾರ.
ಅವರಿಗೆ ವಿಶ್ ಮಾಡಲು ಅವರ ಮನೆ ಮುಂದೆ ಮಹಿಳಾ ಅಭಿಮಾನಿಗಳು, ಯುವಕರ ದಂಡೇ ಹರಿದುಬಂದಿದೆ. ಸಿನಿಮಾ ರಂಗಕ್ಕೆ ಬಂದು ಇಷ್ಟ ವರ್ಷವಾದರೂ ಅವರ ಕ್ರೇಜ್ ಕೊಂಚವೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದುವೇ ಸಾಕ್ಷಿಯಾಯಿತು.