ಗುರುತೇ ಸಿಗದ ಹಾಗೆ ಬದಲಾದರು ಡಿ ಬಾಸ್ ದರ್ಶನ್

ಗುರುವಾರ, 6 ಜೂನ್ 2019 (10:10 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಹೊಸ ಪೋಸ್ಟರ್ ಒಂದು ನಿನ್ನೆಯಷ್ಟೇ ಬಿಡುಗಡೆಯಾಗಿದ್ದು ಭಾರೀ ವೈರಲ್ ಆಗಿದೆ.


ಡಿ ಬಾಸ್ ಬುಲೆಟ್ ಮೇಲೆ ಕುಳಿತಿರುವ ಲುಕ್ ಒಂದನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿ ಅಭಿಮಾನಿಗಳು ರಾಬರ್ಟ್ ಸಿನಿಮಾ ಬಗ್ಗೆ ಭಾರೀ ಕುತೂಹಲ ಬೆಳೆಸಿಕೊಂಡಿದ್ದಾರೆ.

ಅದಕ್ಕೆ ಕಾರಣ ಡಿ ಬಾಸ್ ಲುಕ್. ದರ್ಶನ್ ಬೈಕ್ ಮೇಲೆ ಹಿಂಬದಿ ಕಾಣಿಸುವಂತೆ ಕೂತರೂ ಅವರ ಹೇರ್ ಸ್ಟೈಲ್ ನೋಡಿದ್ರೆ ಇವರೇನಾ ದರ್ಶನ್ ಎನ್ನುವಷ್ಟು ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ. ಉದ್ದ ಕೂದಲು ಬಿಟ್ಟಿರುವ ದರ್ಶನ್ ದಾಡಿ ಕೂಡಾ ಬಿಟ್ಟಿದ್ದಾರಂತೆ. ಈ ಸಿನಿಮಾದಲ್ಲಿ ದರ್ಶನ್ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಕ್ಕೂ ಮೊದಲು ಆಂಜನೇಯನ ವೇಷ ಧರಿಸಿದ ದರ್ಶನ್ ಲುಕ್ ಬಿಡುಗಡೆಯಾಗಿತ್ತು. ಹೀಗಾಗಿ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ