ರಾಮನವಮಿಗೆ ಹೊಸದಾಗಿ ಜೈ ಶ್ರೀರಾಮ ಬಿಡುಗಡೆ ಮಾಡಲಿರುವ ರಾಬರ್ಟ್ ತಂಡ

ಮಂಗಳವಾರ, 31 ಮಾರ್ಚ್ 2020 (10:18 IST)
ಬೆಂಗಳೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಚಿತ್ರರಂಗದ ಚಟುವಟಿಕೆಗಳು ನಡೆಯುತ್ತಿಲ್ಲ. ಈ ನಡುವೆ ರಾಬರ್ಟ್ ಸಿನಿಮಾ ತಂಡ ಹೊಸ ಅಪ್ ಡೇಟ್ ಕೊಟ್ಟಿದೆ.


ಏಪ್ರಿಲ್ 2 ರಂದು ಶ್ರೀರಾಮ ನವಮಿಯಿದ್ದು ಈ ವಿಶೇಷ ದಿನ ‘ಜೈ ಶ್ರೀರಾಮ’ ಹಾಡಿನ ಹೊಸ ಅವತರಣಿಗೆ ಬಿಡುಗಡೆ ಮಾಡುವುದಾಗಿ ಹೇಳಿದೆ.

ಈಗಾಗಲೇ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿತ್ತು. ಆದರೆ ಇದೀಗ ಹೊಸದಾಗಿ ಬಿಡುಗಡೆಯಾಗಲಿರುವ ಹಾಡು ಯಾವ ರೀತಿ ಇರಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರ್ದೇಶಕ ತರುಣ್ ಸುಧೀರ್ ಇಂದು ಹೇಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ