ಅತ್ತೆ ಮೀನಾ ಜತೆ ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯಲಕ್ಷ್ಮಿ ದರ್ಶನ್

Sampriya

ಸೋಮವಾರ, 23 ಡಿಸೆಂಬರ್ 2024 (17:00 IST)
Photo Courtesy X
ಬೆಂಗಳೂರು: ನಟ ದರ್ಶನ್‌ಗೆ ಬೇಲ್ ಸಿಕ್ಕ ಹಿನ್ನೆಲೆ ಪತ್ನಿ ವಿಜಯಲಕ್ಷ್ಮಿ ಇಂದು ಅತ್ತೆ ಮೀನಾ, ದಿನಕರ್ ತೂಗುದೀಪ್ ಜತೆಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಬೇಲ್ ಸಿಗಲಿ ಎಂದು ವಿಜಯಲಕ್ಷ್ಮಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಇದೀಗ ಅದನ್ನು ತೀರಿಸಲು ಕುಟುಂಬ ಸಮೇತ ತೆರಳಿದ್ದಾರೆ. ದರ್ಶನ್ ಹೊರತು ಪಡಿಸಿ, ಕುಟುಂಬದವರು ಎಲ್ಲರೂ ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು.

 ರೆಗ್ಯೂಲರ್ ಬೇಲ್ ಸಿಗುತ್ತಿದ್ದ ಹಾಗೇ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್ ಇದೀಗ ತಮ್ಮ ಮೈಸೂರಿನ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.  ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಇರುವ ಫ್ಲ್ಯಾಟ್‌ಗೆ ಹೋಗಿದ್ದರು.

ಇದೀಗ ಪತ್ನಿ ವಿಜಯಲಕ್ಷ್ಮಿ ಜತೆ ದರ್ಶನ್ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ