Darshan Thoogudeepa: ಕಷ್ಟದ ಸಮಯದಲ್ಲಿ ಜೊತೆಗೇ ಇರುವ ಧನ್ವೀರ್ ಗೌಡಗಾಗಿ ಈ ಕೆಲಸ ಮಾಡಲು ಮುಂದಾದ ದರ್ಶನ್

Krishnaveni K

ಮಂಗಳವಾರ, 25 ಮಾರ್ಚ್ 2025 (12:22 IST)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋದ ಮೇಲೆ ಅವರ ಜೊತೆಗೇ ಇದ್ದವರೆಂದರೆ ಧನ್ವೀರ್ ಗೌಡ. ಇದೀಗ ಅದೇ ಧನ್ವೀರ್ ಗೌಡಗಾಗಿ ದರ್ಶನ್ ಈ ಒಂದು ಕೆಲಸ ಮಾಡಲು ಮುಂದಾಗಿದ್ದಾರೆ.

ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ದರ್ಶನ್ ವೈಯಕ್ತಿಕವಾಗಿ ಮನೆ ಮುಂದೆ ಅಭಿಮಾನಿಗಳನ್ನು ಭೇಟಿ ಮಾಡಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕೆಲವು ಪೋಸ್ಟ್ ಹಾಕಿಕೊಂಡಿದ್ದು ಬಿಟ್ಟರೆ ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದರು.

ಆದರೆ ಈಗ ಧನ್ವೀರ್ ಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. ಕಷ್ಟದ ಸಮಯದಲ್ಲಿ ತಮ್ಮ ಜೊತೆಗೇ ನಿಂತ ಧನ್ವೀರ್ ಸಿನಿಮಾ ‘ವಾಮನ’ ಬಿಡುಗಡೆಗೆ ಸಿದ್ಧವಾಗಿದೆ. ಇದೀಗ ವಾಮನ ಸಿನಿಮಾಗೆ ದರ್ಶನ್ ಸಾಥ್ ಕೊಡಲಿದ್ದಾರೆ.

ವಾಮನ ಸಿನಿಮಾ ಪ್ರಚಾರದಲ್ಲಿ ದರ್ಶನ್ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮೊದಲ ಬಾರಿಗೆ ಭಾಗಿಯಾಗಲಿದ್ದಾರೆ. ಮಾರ್ಚ್ 27 ರಂದು ಪ್ರಸನ್ನ ಥಿಯೇಟರ್ ನಲ್ಲಿ ನಡೆಯಲಿರುವ ವಾಮನ ಪ್ರಚಾರ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ. ಈ ಮೂಲಕ ತಮ್ಮ ಮನೆ ಮಗನಂತೆ ಕಷ್ಟದ ಸಮಯದಲ್ಲಿ ಯೋಗ ಕ್ಷೇಮ ನೋಡಿಕೊಂಡ ಧನ್ವೀರ್ ಗೆ ಈಗ ಹೆಗಲು ಕೊಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ