ಮೈಸೂರು ಫಾರ್ಮ್ ಹೌಸ್ ಸೇರಿಕೊಂಡಿರುವ ದರ್ಶನ್ ನಿಂದ ಮತ್ತೊಂದು ಗುಡ್ ನ್ಯೂಸ್

Krishnaveni K

ಶನಿವಾರ, 21 ಡಿಸೆಂಬರ್ 2024 (15:33 IST)
ಮೈಸೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೇಲ್ ನಲ್ಲಿ ಹೊರಬಂದಿರುವ ನಟ ದರ್ಶನ್ ಈಗ ಮೈಸೂರಿನ ಫಾರ್ಮ್ ಹೌಸ್ ನಲ್ಲಿದ್ದಾರೆ. ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.

ದರ್ಶನ್ ಈಗ ರೆಗ್ಯುಲರ್ ಜಾಮೀನಿನಲ್ಲಿ ಹೊರಗಿದ್ದಾರೆ. ಮೊನ್ನೆಯಷ್ಟೇ ಕೋರ್ಟ್ ಅನುಮತಿ ಪಡೆದು ಮೈಸೂರಿನ ತಮ್ಮ ಫಾರ್ಮ್ ಹೌಸ್ ಗೆ ಬಂದಿದ್ದಾರೆ. ಇದೀಗ ಫ್ಯಾಮಿಲಿ ಜೊತೆ ದರ್ಶನ್ ಜಾಲಿ ಟೈಮ್ ಕಳೆಯುತ್ತಿದ್ದಾರೆ.

ಈ ನಡುವೆ ಅವರ ಅಭಿಮಾನಿಗಳು ಸಿನಿಮಾ ಶೂಟಿಂಗ್ ಯಾವಾಗ ಎಂದು ಕೇಳುತ್ತಿದ್ದಾರೆ. ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ದರ್ಶನ್ ಫೆಬ್ರವರಿಯಿಂದ ಡೆವಿಲ್ ಶೂಟಿಂಗ್ ಪುನರಾರಂಭಿಸಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ದರ್ಶನ್ ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಇದಾದ ಬಳಿಕ ದರ್ಶನ್ ಶೂಟಿಂಗ್ ನಲ್ಲಿ ಮತ್ತೆ ಯಥಾವತ್ತಾಗಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮಿಲನ ಪ್ರಕಾಶ್ ನಿರ್ದೇಶನದ ಡೆವಿಲ್ ಸಿನಿಮಾ ಶೂಟಿಂಗ್ ಸೆಟ್ ನಿಂದಲೇ ದರ್ಶನ್ ಅರೆಸ್ಟ್ ಆಗಿದ್ದರು. ಈ ಸಿನಿಮಾದ ಕೆಲವು ಭಾಗದ ಚಿತ್ರೀಕರಣ ಬಾಕಿಯಿದೆ. ಅದನ್ನು ಸದ್ಯದಲ್ಲಿಯೇ ಮುಗಿಸಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ