ಮಾನಹಾನಿಕರ ಹೇಳಿಕೆ: ಯುವ ರಾಜ್​ಕುಮಾರ್ ಪತ್ನಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಸಪ್ತಮಿ ಗೌಡ

sampriya

ಶನಿವಾರ, 15 ಜೂನ್ 2024 (19:32 IST)
Photo By Instagram
ಬೆಂಗಳೂರು: ದೊಡ್ಮನೆ ಕುಟುಂಬದ ಕುಡಿ ನಟ ಯುವ ರಾಜ್‌ಕುಮಾರ್‌ ಅವರು ಪತ್ನಿ ಶ್ರೀದೇವಿ ವಿರುದ್ಧ ಅಗೌರವ, ಮಾನಸಿಕ ಕ್ರೌರ್ಯದ ಆರೋಪ ಹೊರಿಸಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅದಲ್ಲದೆ ಯುವರಾಜ್ ಕುಮಾರ್ ಪರ ವಕೀಲ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಶ್ರೀದೇವಿ ಅವರ ಚಾರಿತ್ಯ್ರದ ಬಗ್ಗೆ ಅನುಮಾನ ಬರುವಂಥಹಾ ಆರೋಪಗಳನ್ನು ಹೊರಿಸಿದ್ದರು.

ಈ ಸುದ್ದಿ ರಾಜ್ಯದಾದ್ಯಂತ ದೊಡ್ಡ ಸದ್ದು ಮಾಡಿದ್ದು, ಈ ಸಂಬಂಧ ಶ್ರೀದೇವಿ ಅವರ ತಂದೆ  ರಾಘವೇಂದ್ರ ರಾಜ್‌ಕುಮಾರ್‌ ಕುಟುಂಬದ ವಿರುದ್ಧ ಅನೇಕ ಆರೋಪ ಮಾಡಿ, ನನ್ನ ಮಗಳಿಗೆ ಅನೇಕ ರೀತಿಯಲ್ಲಿ ತೊಂದರೆ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು.

ಇನ್ನೂ ಶ್ರೀದೇವಿ ಅವರು ಕೂಡಾ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ, ಪತಿ ಯುವ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿದ್ದರು. ಅಲ್ಲದೆ, ಸಪ್ತಮಿ ಗೌಡ ಹೆಸರನ್ನು ಸಹ ಪ್ರಕರಣದಲ್ಲಿ ಎಳೆದು ತಂದಿದ್ದರು. ಸಪ್ತಮಿ ಗೌಡ ಹಾಗೂ ಯುವರಾಜ್ ಪರಸ್ಪರ ಸಂಬಂಧದಲ್ಲಿದ್ದಾರೆ. ತಾವು ಅಮೆರಿಕಕ್ಕೆ ತೆರಳಿದಾಗ ಯುವ ಹಾಗೂ ಸಪ್ತಮಿ ಸಜೀವನ ನಡೆಸಿದ್ದಾರೆ ಎಂದು ಶ್ರೀದೇವಿ ಭೈರಪ್ಪ ಆರೋಪ ಮಾಡಿದ್ದರು. ಸಪ್ತಮಿ ಗೌಡ ಅವರಿಗಾಗಿ ನನ್ನನ್ನು ಮನೆಯಿಂದ ಹೊರಗೆ ಹಾಕುವ ಪ್ರಯತ್ನವೂ ನಡೆದಿತ್ತು ಎಂದು ಸಹ ಶ್ರೀದೇವಿ ತಮ್ಮ ವಕೀಲರ ಮೂಲಕ ಆರೋಪ ಮಾಡಿದ್ದರು.

ಇನ್ನೂ ಈ ವಿಚ್ಛೇಧನದಲ್ಲಿ ನಟಿ ಸಪ್ತಮಿ ಗೌಡ ಅವರ ಹೆಸರು ಮುನ್ನೆಲೆಗೆ ಬರುತ್ತಿದ್ದ ಹಾಗೇ ಶ್ರೀದೇವಿ ಭೈರಪ್ಪ ವಿರುದ್ಧ ಕಾಂತಾರ ಬೆಡಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 

ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಶ್ರೀದೇವಿ ಭೈರಪ್ಪ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಸಪ್ತಮಿ ಗೌಡ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ. ತಮ್ಮ ವಿರುದ್ಧ ಶ್ರೀದೇವಿ, ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ. ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಸಪ್ತಮಿ ಆರೋಪ ಮಾಡಿದ್ದು, ಶ್ರೀದೇವಿ ಭೈರಪ್ಪ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡುವಂತೆ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಸಲ್ಲಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ