ಕೋಟಿ ಖರ್ಚು ಮಾಡಿ ಮದುವೆಯಾದ ವಿಶ್ವದ ಮೊದಲ ಬಡವ ಧನಂಜಯ್: ಟ್ರೋಲ್‌

Sampriya

ಸೋಮವಾರ, 17 ಫೆಬ್ರವರಿ 2025 (15:48 IST)
Photo Courtesy X
ಬೆಂಗಳೂರು:  ಈ ಹಿಂದೆ ಮೌಢ್ಯಾಚಾರಣೆ ಹಾಗೂ ಕಂದಾಚಾರದ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದ ನಟ ಡಾಲಿ ಧನಂಜಯ್ ಅವರು ಇದೀಗ ಅದ್ಧೂರಿಯಾಗಿ ಮದುವೆಯಾಗಿರುವುದಕ್ಕೆ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ.

ತಮ್ಮಂದೇ ಆದ ಸಿದ್ಧಾಂತಗಳನ್ನು ಹೊಂದಿರುವ ನಟ ಧನಂಜಯ್ ಅವರು ಈ ಹಿಂದೆ ಮಂತ್ರಮಾಂಗಲ್ಯದ ಬಗ್ಗೆ ಒಲವು ತೋರಿಸಿದ್ದರು. ಆದರೆ ಅವರು ಮಾತ್ರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ, ಅದ್ಧೂರಿಯಾಗಿ ಡಾ.ಧನ್ಯತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ವಿಚಾರವನ್ನು ಮುಂದಿಟ್ಟು ಅವರನ್ನು ಟ್ರೋಲ್‌ ಮಾಡಲಾಗಿದೆ. ಅದಲ್ಲದೆ ಅವರ ಸಿನಿಮಾದಲ್ಲಿ ಬಡವರ ಮಕ್ಕಳು  ಬೆಳಿಬೇಕು ಎನ್ನುವ ಡೈಲಾಂಗ್ ಮುಂದಿಟ್ಟು,  ಕೋಟಿ ಖರ್ಚು ಮಾಡಿ ಮದುವೆಯಾದ ವಿಶ್ವದ ಮೊದಲ ಬಡವ ಧನಂಜಯ್ ಎಂದು ಟ್ರೋಲ್ ಮಾಡಿದ್ದಾರೆ.

ಬಡವರ ಮಕ್ಕಳು ಬೆಳಿಬೇಕು ಅಂದವರು ಇನ್ನೂ ಬಡವರಾಗಿಯೇ ಇದ್ದಾರೆ ಎಂದು  ಟ್ರೋಲ್ ಮಾಡುತ್ತಿದ್ದಾರೆ.

ಕೋಟಿ ಖರ್ಚು ಮಾಡಿ ಮದುವೆಯಾದ ವಿಶ್ವದ ಮೊದಲ ಬಡವ.

ಬಡವರ ಮಕ್ಕಳು ಬೆಳಿಬೇಕು ಅಂದವರು ಇನ್ನೂ ಬಡವರಾಗಿಯೇ ಇದ್ದಾರೆ.

Bsd ಮಕ್ಕಳು ಬಡವರ ಹೆಸರು ಹೇಳಿಕೊಂಡು ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ.pic.twitter.com/9IQXa1NjzK

— ???? ???? ಸಭ್ಯಸ್ಥ ???????? (@naa_kannada) February 16, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ