ಸಂಗೀತ ದಿಗ್ಗಜ ಇಳಯರಾಜ ಬಯೋಪಿಕ್ ನಲ್ಲಿ ಧನುಷ್?

ಶುಕ್ರವಾರ, 4 ಆಗಸ್ಟ್ 2023 (08:30 IST)
ಚೆನ್ನೈ: ಬಹುಬಾಷೆಗಳಲ್ಲಿ ಸಂಗೀತ ಸಂಯೋಜಿಸಿ ಅನೇಕ ಯುವ ಸಂಗೀತ ನಿರ್ದೇಶಕರಿಗೆ ಮಾನಸ ಗುರುವಾಗಿರುವ ದಿಗ್ಗಜ ಸಂಗೀತ ನಿರ್ದೇಶಕ ಇಳಯರಾಜ ಜೀವನಕತೆಯನ್ನಾಧರಿಸಿ ಸಿನಿಮಾ ಮಾಡಲಾಗುತ್ತಿದೆ.

ಈ ಸಿನಿಮಾದಲ್ಲಿ ಇಳಯರಾಜ ಪಾತ್ರವನ್ನು ತಮಿಳು ನಟ ಧನುಷ್ ನಿರ್ವಹಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸ್ವತಃ ಇಳಯರಾಜ ಪುತ್ರ ಯುವನ್ ಶಂಕರ್ ರಾಜ ಈ ಸಿನಿಮಾ ಮಾಡಲು ಹೊರಟಿದ್ದಾರೆ.

ಹಿಂದೊಮ್ಮೆ ಧನುಷ್ ರನ್ನು ತಮ್ಮ ತಂದೆಯ ಪಾತ್ರದಲ್ಲಿ ನೋಡಲು ಬಯಸುವುದಾಗಿ ಯುವನ್ ಹೇಳಿಕೊಂಡಿದ್ದರು. ಹೀಗಾಗಿ ಈಗ ಧನುಷ್ ಸಂಗೀತ ಮಾಂತ್ರಿಕನ ಪಾತ್ರ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸದ್ಯಕ್ಕೆ ಧನುಷ್ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ