ಮನೆ ಶಿಫ್ಟ್ ಮಾಡುವ ನಿರ್ಧಾರ ಮಾಡಿದ ಧ್ರುವ ಸರ್ಜಾ. ಕಾರಣವೇನು ಗೊತ್ತಾ?

ಮಂಗಳವಾರ, 27 ನವೆಂಬರ್ 2018 (07:29 IST)
ಬೆಂಗಳೂರು : ತಮ್ಮ ಬಾಲ್ಯದ ಗೆಳತಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ರೆಡಿಯಾದ ಸ್ಯಾಂಡಲ್ ವುಡ್ ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು  ವಾಸ್ತು ದೋಷ ಕಾರಣಕ್ಕಾಗಿ ಇದೀಗ ಮನೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ.

ಹೌದು. ನಟ ಧ್ರುವ ಸರ್ಜಾ ಬನಶಂಕರಿಯ ಕೆ.ಆರ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಈಗ ವಾಸ್ತು ದೋಷದಿಂದ ಬನಶಂಕರಿಯ ಕೆ.ಆರ್ ರಸ್ತೆಯಿಂದ ಸದಾಶಿವನಗರದಲ್ಲಿರುವ 2 ಲಕ್ಷ ಬಾಡಿಗೆ ವೆಚ್ಚದ ಅದ್ಧೂರಿ ಬಂಗಲೆ ಖರೀದಿಸಿದ್ದು, ಡಿಸೆಂಬರ್ 9ರ ನಿಶ್ಚಿತಾರ್ಥದ ನಂತರ ಆ ಮನೆಗೆ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ.

 

ಆದರೆ ತಮ್ಮ ನಿಶ್ಚಿತಾರ್ಥ ವಿಚಾರ ಬಹಿರಂಪಡಿಸಿದ ತಕ್ಷಣ  ಧ್ರುವ ಸರ್ಜಾ ಅವರಿಗೆ ಹುಡುಗಿಯರಿಂದ ಬೆದರಿಕೆ ಕರೆಗಳು ಬಂದ ಕಾರಣ ಮನೆ ಶಿಪ್ಟ್ ಮಾಡುವ ನಿರ್ಧಾರ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ