ಅಂಬರೀಶ್ ಅಂತ್ಯಸಂಸ್ಕಾರದ ವಿಧಿವಿಧಾನಕ್ಕೆ ಸಿದ್ಧತೆ ಹೀಗಿದೆ ನೋಡಿ
ಸೋಮವಾರ, 26 ನವೆಂಬರ್ 2018 (14:03 IST)
ಬೆಂಗಳೂರು : ಈಗಾಗಲೇ ನಟ ಅಂಬರೀಶ್ ಅವರ ಅಂತಿಮಯಾತ್ರೆ ಆರಂಭವಾಗಿದ್ದು, ಇತ್ತ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಸಂಸ್ಕಾರದ ವಿಧಿವಿಧಾನಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ.
ಅಂಬರೀಶ್ ಅವರ ಪಾರ್ಥಿವ ಶರೀರದ ಅಗ್ನಿ ಸ್ಪರ್ಶಕ್ಕೆ ಸುಮಾರು 7 ರೀತಿಯ ಸೌದೆ ಬಳಕೆ ಮಾಡಲಾಗುವುದು. ಬೆರಣಿ ತುಪ್ಪ, ಬೆಣ್ಣೆ ಧೂಪ, ಗಂಧದ ಕಡ್ಡಿ ಬಳಕೆ ಮಾಡಲಾಗುತ್ತಿದೆ.
10 ಅಡಿ ಉದ್ದ ಹಾಗೂ 8 ಅಡಿ ಅಗಲವಾದ ಕಟ್ಟೆ ನಿರ್ಮಾಣ ಮಾಡಲಾಗಿದೆ. ಮದ್ದೂರು ಮೂಲದ ಹುಚ್ಚಯ್ಯ ಕೋಣಪ್ಪರಿಂದ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಅಗ್ನಿ ಸ್ಪರ್ಶಕ್ಕಾಗಿ 500 ಕೆಜಿ 300 ತುಂಡು ಗಂಧದ ಮರಗಳ ಬಳಕೆಮಾಡಲಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.