ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ ನಿರ್ದೇಶಕ ಅಲ್ಪೋನ್ಸ್ ಪುಥ್ರೆನ್; ನಾಯಕ ನಾಯಕಿ ಯಾರು ಗೊತ್ತಾ?

ಸೋಮವಾರ, 21 ಡಿಸೆಂಬರ್ 2020 (10:29 IST)
ಚೆನ್ನೈ : ನಿರ್ದೇಶಕ ಅಲ್ಪೋನ್ಸ್ ಪುಥ್ರೆನ್ ತಮ್ಮ ಮುಂದಿನ ಚಿತ್ರವನ್ನು ಹಾಗೂ ನಾಯಕ ನಾಯಕಿಯನ್ನು ಘೋಷಣೆ ಮಾಡಿದ್ದಾರೆ.

ಇವರು ನವಿನ್ ಪಾಲಿ ಮತ್ತು ಸಾಯಿ ಪಲ್ಲವಿ , ಮಡೋನಾ ಮತ್ತು ಅನುಪಮಾ ನಟಿಸಿದ ಚಿತ್ರವನ್ನು ನಿರ್ದೇಶಿಸಿದ ಬಳಿಕ ಮತ್ತೆ ಯಾವುದೇ ಚಿತ್ರವನ್ನು ಬಿಡುಗಡೆ ಮಾಡಿಲ್ಲ.

ಆದರೆ ಇದೀಗ ನಿರ್ದೇಶಕ ಅಲ್ಪೋನ್ಸ್ ಪುಥ್ರೆನ್ ಫೇಸ್ ಬುಕ್ ನಲ್ಲಿ ತಮ್ಮ ಮುಂದಿನ ಚಿತ್ರದ ಬಗ್ಗೆ ಪ್ರಕಟಣೆ ಮಾಡಿದ್ದಾರೆ. ಚಿತ್ರದ ಹೆಸರು ‘ಪಟ್ಟು’ ಎಂದು ಹಾಗೂ ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ನಾಯಕನಾಗಿ ಫಹಾದ್ ಫಾಸಿಲ್ ನಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ