ಸಮಸ್ಯೆ ಬಂದಾಗ ನಾವು ಬೇಕು: ಕಾವೇರಿ ಹೋರಾಟದಲ್ಲಿ ದರ್ಶನ್ ಹೇಳಿಕೆಗೆ ನಿರ್ದೇಶಕ ಶಶಾಂಕ್ ಬೆಂಬಲ

ಮಂಗಳವಾರ, 26 ಸೆಪ್ಟಂಬರ್ 2023 (09:20 IST)
ಬೆಂಗಳೂರು: ಕಾವೇರಿ ಹೋರಾಟದ ವಿಚಾರಕ್ಕೆ ಬಂದರೆ ಕನ್ನಡ ಕಲಾವಿದರು ಬರಲ್ಲ ಎಂದು ಆರೋಪ ಮಾಡುವವರಿಗೆ ನಟ ದರ್ಶನ್ ಮೊನ್ನೆ ತಕ್ಕ ಉತ್ತರ ನೀಡಿದ್ದರು.

ನಿಮಗೆ ನಾನು, ಸುದೀಪ್, ಯಶ್ ರಂತಹ ನಾಯಕ ನಟರು ಮಾತ್ರ ಕಾಣೋದಾ? ಮೊನ್ನೆಯಷ್ಟೇ ಬಂದ ತಮಿಳು ಸಿನಿಮಾವನ್ನು ಕನ್ನಡದಲ್ಲಿ ವಿತರಿಸಿ ಕೋಟ್ಯಾಂತರ ರೂಪಾಯಿ ಇಲ್ಲಿನ ದುಡ್ಡು ಬಾಚಿಕೊಂಡು ಹೋದರಲ್ಲಾ ಅವರನ್ನು ಯಾಕೆ ಹೋರಾಟಕ್ಕೆ ಬರಲ್ಲ ಎಂದು ಪ್ರಶ್ನೆ ಮಾಡಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ದರ್ಶನ್ ಹೇಳಿಕೆಗೆ ಈಗ ನಿರ್ದೇಶಕ ಶಶಾಂತ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ನಾನು,ನುಡಿ, ನೀರಿನ ವಿಚಾರಕ್ಕೆ ಬಂದಾಗ ಕನ್ನಡ ಚಿತ್ರರಂಗದ ಬೆಂಬಲ ಬೇಕು. ಒಳ್ಳೆಯ ಕನ್ನಡ ಸಿನಿಮಾ ಬಂದಾಗ ಬೆಂಬಲ ನೀಡಿ ಎಂದರೆ ನಮ್ಮ ದುಡ್ಡು ನಮ್ಮ ಇಷ್ಟ ಎನ್ನುವ ಜನರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೀರಾ ದರ್ಶನ್ ಸರ್. ನಿಮ್ಮ ನೇರ ನುಡಿಗೆ ಧನ್ಯವಾದಗಳು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ